

ಲಖನೌ(ಉತ್ತರ ಪ್ರದೇಶ): ಪ್ರಸಿದ್ಧ ಉದ್ಯಮಿ ಮಗನೊಬ್ಬನ ಕರೆ ಮೇರೆಗೆ ಥಾಯ್ಲೆಂಡ್ನಿಂದ ಭಾರತಕ್ಕೆ ಬಂದ ಕಾಲ್ ಗರ್ಲ್ ಇಲ್ಲೇ ಮೃತಪಟ್ಟಿದ್ದು, ಅನುಮಾನಕ್ಕೆ ಎಡೆ ಮಾಡಿದೆ.
ಇತ್ತೀಚಿಗೆ ಉದ್ಯಮಿ ಪುತ್ರನೊಬ್ಬ ತುಂಬಾ ಆಸೆಯಿಂದ ಏಜೆಂಟ್ ಮೂಲಕ ಥಾಯ್ಲೆಂಡ್ನಿಂದ ಕಾಲ್ ಗರ್ಲ್ವೊಬ್ಬಳನ್ನ ಬರೋಬ್ಬರಿ 7 ಲಕ್ಷ ರೂಪಾಯಿ ಖರ್ಚು ಮಾಡಿ ಲಖನೌಗೆ ಕರೆಸಿಕೊಂಡಿದ್ದ. ಏ.28ರಂದು ಇದ್ದಕ್ಕಿದ್ದಂತೆ ಆಕೆ ಅನಾರೋಗ್ಯಕ್ಕೀಡಾಗಿದ್ದು, ಲೋಹಿಯಾ ಆಸ್ಪತ್ರೆಗೆ ಉದ್ಯಮಿ ಪುತ್ರ ಕರೆದೊಯ್ದ ಬೆನ್ನಲ್ಲೇ ಆತನಿಗೆ ಶಾಕ್ ಕಾದಿತ್ತು. ಸೆಕ್ಸ್ ಮೂಡ್ನಲ್ಲಿದ್ದವನಿಗೆ ಆಸ್ಪತ್ರೆಯ ವರದಿ ಕೇಳಿ ಆತಂಕ ಶುರುವಾಗಿತ್ತು.
ಆಸ್ಪತ್ರೆಯಲ್ಲಿ ಕಾಲ್ ಗರ್ಲ್ಗೆ ಕೋವಿಡ್ ಪರೀಕ್ಷೆ ಮಾಡಿದ್ದು, ವರದಿ ಪಾಸಿಟಿವ್ ಬಂದಿದೆ. ಚಿಕಿತ್ಸೆ ನೀಡಲಾಯಿತ್ತಾದರೂ ಆಕೆ ಮೇ 3ರಂದು ಕೊನೆಯುಸಿರೆಳೆದಳು. ಇದಕ್ಕೂ ಮುನ್ನ ಈತ ಥಾಯ್ಲೆಂಡ್ ರಾಯಭಾರ ಕಚೇರಿ ಸಂಪರ್ಕಿಸಿ ಕಾಲ್ಗರ್ಲ್ಗೆ ಕರೊನಾ ಇರುವ ವಿಚಾರ ತಿಳಿಸಿದ್ದ. ಬಳಿಕ ಭಾರತದ ವಿದೇಶಾಂಗ ಸಚಿವಾಲಯದ ನೆರವಿನಲ್ಲಿ ಯುವತಿಯನ್ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದನ್ನೂ ಓದಿರಿ ಅಪ್ಪ ಸತ್ತ 4 ದಿನಕ್ಕೆ ಅಮ್ಮನೂ ಕೋವಿಡ್ಗೆ ಬಲಿ! ಅಂತ್ಯಸಂಸ್ಕಾರಕ್ಕೆ ಹಣ ಇಲ್ಲದೆ ಪುಟ್ಟ ಮಗಳೇ ಗುಂಡಿ ಅಗೆದು ಕಾರ್ಯ ಮುಗಿಸಿದ್ಲು
ಮೃತಳ ಶವವನ್ನ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲು ಥಾಯ್ಲೆಂಡ್ ರಾಯಭಾರ ಕಚೇರಿಗೆ ಸಂಪರ್ಕಿಸಿದ್ದನಾದರೂ ಸಫಲವಾಗಲಿಲ್ಲ. ಕೊನೆಗೆ ಲಖನೌದ ಬೈಕುಂತ್ ಚಿತಾಗಾರದಲ್ಲಿಯೇ ಪೊಲೀಸರು ಅಂತ್ಯಕ್ರಿಯೆ ನೆರವೇರಿಸಿದ್ದರು.
ಇದೀಗ ಕಾಲ್ಗರ್ಲ್ ಸಾವಿನ ಪ್ರಕರಣದ ಹಿಂದೆ ಬಿದ್ದ ಪೊಲೀಸರು ತನಿಖೆ ಮುಂದುವರಿಸಿದ್ದು, ಲಖನೌ ರಾಜಧಾನಿಯಲ್ಲಿ ಅಂತಾರಾಷ್ಟ್ರೀಯ ಕಾಲ್ ಗರ್ಲ್ ದಂಧೆ ನಡೆಯುತ್ತಿರುವ ಬಗ್ಗೆ ಶಂಕಿಸಿದ್ದಾರೆ.