

ಮೈಸೂರು: ಗಂಡನಿದ್ದರೂ ಪರಪುರುಷನೊಂದಿಗೆ ಚೆಲ್ಲಾಟವಾಡುತ್ತಿದ್ದ ಮಹಿಳೆ ನಿನ್ನೆ ತಡರಾತ್ರಿ ದುರಂತ ಅಂತ್ಯ ಕಂಡಿದ್ದಾಳೆ.
ಪತ್ನಿಗಿದ್ದ ಅಕ್ರಮ ಸಂಬಂಧವನ್ನ ಕೊನೆಗಾಣಿಸಲು ಗಂಡ ಊರು ಬಿಟ್ಟು ಮತ್ತೊಂದು ಊರಿಗೆ ಆಕೆಯನ್ನ ಕರೆತಂದರೂ ಹಳೇ ಚಾಳಿ ಬಿಟ್ಟಿರಲಿಲ್ಲವಂತೆ. ಇದೇ ವಿಚಾರವಾಗಿ ಹಲವು ಬಾರಿ ಮನೆಯಲ್ಲಿ ದಂಪತಿ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದನ್ನೂ ಓದಿರಿ ಕಾಲ್ ಗರ್ಲ್ ಜತೆ ಸೆಕ್ಸ್ ಮೂಡ್ನಲ್ಲಿದ್ದ ಉದ್ಯಮಿ ಪುತ್ರನಿಗೆ ಕಾದಿತ್ತು ಶಾಕ್! ಕಾಮದಾಟಕ್ಕೆ ಬಂದವಳು ದುರಂತ ಅಂತ್ಯ
ಸಿಟ್ಟಿಗೆದ್ದ ಪತಿ ಕುಡಿದ ಅಮಲಿನಲ್ಲಿ ಪತ್ನಿಯನ್ನ ನಿನ್ನೆ ರಾತ್ರಿ ಕುಡಿದ ಅಮಲಿನಲ್ಲಿ ಮಚ್ಚಿನಿಂದ ಕೊಚ್ಚಿ ಹಾಕಿದ್ದಾನೆ. ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ನಳಿನಿ(32) ಮೃತ ದುರ್ದೈವಿ. ಈಕೆಯ ಗಂಡ ರಾಜೇಶ್(40) ಕೊಲೆ ಆರೋಪಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಅಕ್ರಮ ಸಂಬಂಧಕ್ಕೆ ಬ್ರೇಕ್ ಹಾಕಲು ರಮಾಬಾಯಿ ನಗರದಿಂದ ಜಯನಗರಕ್ಕೆ ರಾಜೇಶ್ ಮನೆ ಶಿಫ್ಟ್ ಮಾಡಿದ್ದ. ಆದರೂ ನಳಿನಿ ಹಳೇ ಚಾಳಿ ಬಿಟ್ಟಿರಲಿಲ್ಲವಂತೆ. ಕೊನೆಗೆ ಗಂಡನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.‘