More

    ನನ್ನ 10 ವರ್ಷದ ಸರ್ವೀಸ್‌ನಲ್ಲಿ ನಾನು ಇಂತಹ ಕೆಲಸ ಮಾಡಿಲ್ಲ… ಎಂದು ಗದ್ಗದಿತರಾದ ರೋಹಿಣಿ ಸಿಂಧೂರಿ

    ಮೈಸೂರು: ನಮ್ಮ ಜಿಲ್ಲೆಗೆ ಸಮಸ್ಯೆಯಾದರೆ ಅದನ್ನು ನಾವೇ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಬೇರೆ ಜಿಲ್ಲೆಯ ವಿರುದ್ಧ ಆರೋಪ ಮಾಡಬಾರದು. ನನ್ನ 10 ವರ್ಷದ ಸರ್ವೀಸ್‌ನಲ್ಲಿ ನಾನು ಕೆಟ್ಟ ಕೆಲಸ ಮಾಡಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗದ್ಗದಿತರಾದರು.

    ಚಾಮರಾಜನಗರ ಆಕ್ಸಿಜನ್​ ದುರಂತ ಪ್ರಕರಣ ಕುರಿತು ಅಲ್ಲಿನ ಡಿಸಿ ಡಾ.ಎಂ.ಆರ್.ರವಿ ಮಾಡಿರುವ ಆರೋಪಕ್ಕೆ ಗದ್ಗದಿತರಾಗಿ ಪ್ರತಿಕ್ರಿಯಿಸಿದ ರೋಹಿಣಿ ಸಿಂಧೂರಿ, ಸಾವು ಎಲ್ಲಿ ಆದರೂ ಅದು ಸಾವಿ ಸಾವೇ. ಚಾಮರಾಜನಗರ ಜಿಲ್ಲೆಯಲ್ಲಿ ಆಮ್ಲಜನಕ ಕೊರತೆಯಿಂದ ರೋಗಿಗಳು ಮೃತಪಟ್ಟಿರುವುದು ನೋವುಂಟು ಮಾಡಿದೆ. ಆದರೆ ಅಲ್ಲಿನ ಜಿಲ್ಲಾಧಿಕಾರಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಆಕ್ಸಿಜನ್ ಖಾಲಿ ಆಗುತ್ತಿದೆ ಅನ್ನುವಾಗ ಅಲರ್ಟ್ ಆಗಿ ತರಿಸಿಕೊಳ್ಳಬೇಕಿತ್ತು. ಅದು ಒಬ್ಬ ಜಿಲ್ಲಾಧಿಕಾರಿಯ ಜವಾಬ್ದಾರಿಯೂ ಆಗಿತ್ತು. ಮೈಸೂರಿನ ಕೋವಿಡ್ ಆಸ್ಪತ್ರೆಯಿಂದ ಕೊನೇ ಕ್ಷಣದಲ್ಲಿ 40 ಸಿಲಿಂಡರ್ ಕಳುಹಿಸಿಕೊಟ್ಟಿದ್ದೇವೆ. ಇನ್ನೂ ಹೇಗೆ ಸ್ಪಂದಿಸಬೇಕಿತ್ತು? ಎಂದು ಪ್ರಶ್ನಿಸಿದರು. ನಾನು ಚಾಮರಾಜನಗರಕ್ಕೆ ಆಕ್ಸಿಜನ್​ ತಡೆದಿಲ್ಲ. ತನಿಖೆ ಬಳಿಕ ಸತ್ಯಾಸತ್ಯತೆ ಗೊತ್ತಾಗುತ್ತೆ. ಇಲ್ಲಸಲ್ಲದ ಆರೋಪದಿಂದ ನನಗೆ ನೋವಾಗಿದೆ ಎಂದು ಭಾವುಕರಾದರು

    ಮೈಸೂರಿನಲ್ಲಿ ಆಮ್ಲಜನಕ ಉತ್ಪಾದನೆ ಆಗಲ್ಲ. ನಾವೂ ಬಳ್ಳಾರಿಯಿಂದ ತರಿಸಿಕೊಳ್ಳುತ್ತಿದ್ದೇವೆ. ಆಕ್ಸಿಜನ್ ಏಜೆನ್ಸಿಗಳು ಮತ್ತು ಚಾಮರಾಜನಗರ ಜಿಲ್ಲೆ ಒಪ್ಪಂದ ಆಗಿದೆ. ಅದರಂತೆ ಏಜೆನ್ಸಿಗಳು ಆಮ್ಲಜನಕ ಪೂರೈಕೆ ಮಾಡುತ್ತವೆ. ಆಕ್ಸಿಜನ್ ಖಾಲಿ ಆಗುತ್ತಿದೆ ಅನ್ನುವಾಗ ಅಲರ್ಟ್ ಆಗಿ ತರಿಸಿಕೊಳ್ಳಬೇಕಿತ್ತು ಎಂದು ಚಾಮರಾಜನಗರ ಜಿಲ್ಲಾಧಿಕಾರಿಯ ಆರೋಪಕ್ಕೆ ರೋಹಿಣಿ ಸಿಂಧೂರಿ ತಿರುಗೇಟು ನೀಡಿದರು.

    8 ಸಿಂಹಗಳಿಗೆ ಕರೊನಾ ಪಾಸಿಟಿವ್​, ಜೀವಿ ಸಂಕುಲ ತಲ್ಲಣ: ಪ್ರಾಣಿಗಳಲ್ಲಿ ಕಂಡು ಬಂದ ರೋಗ ಲಕ್ಷಣ ಹೀಗಿದೆ…

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

    ಅಪಘಾತ: ಸಾವಿನಲ್ಲೂ ಸಾರ್ಥಕತೆ ಮೆರೆದ ಚಿತ್ರದುರ್ಗ ಉಪವಿಭಾಗಾಧಿಕಾರಿ ವಿ.ಪ್ರಸನ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts