

ಚೆನ್ನೈ: ಕಾರಿನಲ್ಲಿ ತನ್ನ ನಗ್ನ ದೃಶ್ಯವನ್ನು ಸೆರೆ ಹಿಡಿದು ಬ್ಲ್ಯಾಕ್ಮೇಲ್ ಮಾಡುತ್ತ ಹಿಂಸಿಸುತ್ತಿದ್ದ ಗೆಳೆಯನ ವಿರುದ್ಧ ಟಿವಿ ಸೀರಿಯಲ್ ನಟಿಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಮಿಳುನಾಡು ಮೂಲದ 24 ವರ್ಷದ ನಟಿ ಜನ್ನಿಫರ್ ಸಂತ್ರಸ್ತೆ. ಐದು ವರ್ಷದಿಂದ ಕಿರುತೆರೆಯಲ್ಲಿ ಬಣ್ಣಹಚ್ಚಿರುವ ನಟಿಗೆ 2019ರ ಆಗಸ್ಟ್ನಲ್ಲಿ ಚೆನ್ನೈನ ಎಂಜಿಆರ್ ನಗರದ ಶರವಣನ್ ಜತೆ ವಿವಾಹ ಆಗಿತ್ತು. ಇವರಿಬ್ಬರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣ ಕೋರ್ಟ್ನಲ್ಲಿದೆ. ಈ ನಡುವೆ ಜನ್ನಿಫರ್ಗೆ ಧಾರಾವಾಹಿ ಸಹ ನಿರ್ದೇಶಕ ನವೀನ್ಕುಮಾರ್ನ ಗೆಳೆತನ ಬೆಳೆದಿದ್ದು, ಇವರಿಬ್ಬರೂ ಒಟ್ಟಿಗೆ ವಾಸಿಸುತ್ತಿದ್ದರು. ಇದನ್ನೂ ಓದಿರಿ ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಪ್ರೇಮಿಗಳು ಗ್ರಾಮದ ಜಮೀನೊಂದರಲ್ಲಿ ಶವವಾಗಿ ಪತ್ತೆ! ಆ ರಾತ್ರಿ ಆಗಿದ್ದೇನು?
ಕರೊನಾ ಲಾಕ್ಡೌನ್ ಸಮಯದಲ್ಲಿ ನವೀನ್ ಕುಮಾರ್ಗೆ ಕೆಲಸ ಇಲ್ಲದೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈತನ ಗೆಳತಿಗೆ ನಟನೆಯ ಅವಕಾಶ ಸಿಗುತ್ತಿತ್ತು. ಒಂದು ದಿನ ಶೂಟಿಂಗ್ ಮುಗಿಸಿ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ನಟಿಯ ಬೆತ್ತಲೆ ವಿಡಿಯೋವನ್ನ ನವೀನ್ ಸೆರೆ ಹಿಡಿದು ನಂತರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ನವೀನ್ ತಾಯಿಯ ಗಮನಕ್ಕೆ ನಟಿ ತಂದಿದ್ದು, ಮಗ ಹೇಳಿದಂತೆ ಕೇಳು ಎಂದು ಬೆದರಿಕೆ ಹಾಕಿದ್ದಾಳೆ ಎಂದು ಸಂಸ್ತತ್ರೆ ಮನಾಲಿ ಪೊಲೀಸರಿಗೆ ದೂರು ನೀಡಿದ್ದಾರೆ.