More

    ಮೈಸೂರು ಡಿಸಿ v/s ಚಾಮರಾಜನಗರ ಡಿಸಿ: ರೋಹಿಣಿ ಸಿಂಧೂರಿ ಸುಳ್ಳು ಲೆಕ್ಕ ಕೊಟ್ಟು ಸಿಕ್ಕಿಬಿದ್ರಾ?

    ಬೆಂಗಳೂರು: ಚಾಮರಾಜನಗರದ ಕೋವಿಡ್​ ವಾರ್ಡ್​ನಲ್ಲಿ ಆಕ್ಸಿಜನ್​ ಕೊರತೆಗೆ 20ಕ್ಕೂ ಹೆಚ್ಚು ಮಂದಿ ಬಲಿಯಾದ ಬೆನ್ನಲ್ಲೇ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳ ಮುಸುಕಿನ ಗುದ್ದಾಟ ಬಯಲಾಗಿದೆ.

    ಎರಡೂ ಜಿಲ್ಲಾಡಳಿತಗಳ ನಡವಿನ ಸಮನ್ವಯ, ಸಂವಹನದ ಕೊರತೆಯಿಂದಲೇ ಅಮಾಯಕರ ಜೀವಗಳು ಬಲಿಯಾಗಬೇಕಾಯಿತು ಎಂದು ಮಾತುಗಳು ದಟ್ಟವಾಗಿ ಕೇಳಿಬಂದಿದೆ. ಘಟನೆ ಬೆಳಕಿಗೆ ಬಂದ ದಿನವೇ ಮೈಸೂರು ಜಿಲ್ಲಾಡಳಿತ, ಭಾನುವಾರ ರಾತ್ರಿ 12.30ರವರೆಗೂ ಮೈಸೂರಿನಿಂದ ಚಾಮರಾಜನಗರಕ್ಕೆ ಒಟ್ಟು‌ 250 ಆಕ್ಸಿಜನ್ ಸಿಲಿಂಡರ್ ಅನ್ನು ಕಳುಹಿಸಲಾಗಿದೆ. ಆಕ್ಸಿಜನ್ ಲಿಕ್ವಿಡ್ ಬಳ್ಳಾರಿಯಿಂದ ಚಾಮರಾಜನಗರಕ್ಕೆ ಬರಬೇಕಿತ್ತು. ಅದು ಸರಿಯಾದ ಸಮಯದಲ್ಲಿ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಚಾಮರಾಜನಗರದವರ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ ಆಕ್ಸಿಜನ್ ಸಿಲಿಂಡರ್ ಕಳುಹಿಸಲಾಗಿದೆ. ಈ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ವಿಳಂಬ ಮಾಡಿಲ್ಲ. ನಾವು ಅಧಿಕೃತವಾಗಿ 250 ಆಕ್ಸಿಜನ್ ಸಿಲಿಂಡರ್ ಕಳಿಸಿದ್ದೇವೆ. ಇದಕ್ಕೆ ದಾಖಲೆ ಇದೆ ಎಂದು ಸ್ಪಷ್ಟಪಡಿಸಿತ್ತು. ಆದರೂ ಚಾಮರಾಜನಗರಕ್ಕೆ ಮೈಸೂರಿನಿಂದ ಕಳಿಸಬೇಕಿದ್ದ ಆಕ್ಸಿಜನ್​ ಸಿಲಿಂಡರ್​ಗಳನ್ನು ಮೈಸೂರು ಜಿಲ್ಲಾಡಳಿತ ಕಳುಹಿಸಿದ್ದರೆ ಇಷ್ಟೆಲ್ಲ ಅನಾಹುತ ಆಗುತ್ತಲೇ ಇರಲಿಲ್ಲ ಎಂದು ಹಲವರು ಕಿಡಿಕಾರಿದ್ದಾರೆ. ಇದೀಗ ಚಾಮರಾಜನಗ ಡಿಸಿ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿರಿ ಬೆಡ್​ ಬ್ಲಾಕ್​ ದಂಧೆಯ ಬ್ರಹ್ಮಾಂಡ ಬಿಚ್ಚಿಟ್ಟ ತೇಜಸ್ವಿ ಸೂರ್ಯ: ಭ್ರಷ್ಟಾಚಾರ ಅಲ್ಲ ಇದು ಮರ್ಡರ್… ಇವರೆಲ್ಲ ಹುಳ ಬಿದ್ದು ಸಾಯ್ತಾರೆ

    ಚಾಮರಾಜನಗರಕ್ಕೆ ಮೈಸೂರಿನಿಂದ 250 ಆಕ್ಸಿಜನ್ ಸಿಲಿಂಡರ್ ಕಳುಹಿಸಲಾಗಿದೆ ಎಂಬುದು ಸತ್ಯಕ್ಕೆ ದೂರ. ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತುರ್ತು ವೇಳೆ ಮೈಸೂರು ಜಿಲ್ಲಾಡಳಿತ ಸೂಕ್ತ ಸ್ಪಂದನೆ ನೀಡಲಿಲ್ಲ ಎಂದು ರೋಹಿಣಿ ಸಿಂಧೂರಿಗೆ ಚಾಮರಾಜನಗರ ಡಿಸಿ ಎಂ.ಆರ್. ರವಿ ತಿರುಗೇಟು ಕೊಟ್ಟಿದ್ದಾರೆ.

    ಮೈಸೂರು ಡಿಸಿ ಮಾಧ್ಯಮ ಪ್ರಕಟಣೆಗೆ ಪ್ರತಿಯಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಚಾಮರಾಜನಗರ ಜಿಲ್ಲಾಧಿಕಾರಿ, ಭಾನುವಾರ ಸಂಜೆ ವೇಳೆಗೆ ನಮಗೆ 100 ಆಕ್ಸಿಜನ್​ ಸಿಲಿಂಡರ್​ ಬೇಕಿತ್ತು. ಸಕಾಲದಲ್ಲಿ ಸಿಲಿಂಡರ್ ಪೂರೈಕೆಯಾಗಿಲ್ಲ. ಮೈಸೂರು ಜಿಲ್ಲಾಧಿಕಾರಿ ನೀಡಿರುವ ಹೇಳಿಕೆ ಸಂಪೂರ್ಣ ಸರಿಯಿಲ್ಲ. ಮೇ 2ರ ಭಾನುವಾರ ರಾತ್ರಿ ನನ್ನ ಮನವಿ ಮೇರೆಗೆ ಮೈಸೂರಿನ ಪದಕಿ ಸಂಸ್ಥೆಯಿಂದ 50 ಸಿಲಿಂಡರ್ ಮಾತ್ರ ಬಂದಿದೆ. ಚಾಮರಾಜನಗರ ಜಿಲ್ಲೆಗೆ ಮಧ್ಯರಾತ್ರಿವರೆಗೆ 250 ಸಿಲಿಂಡರ್ ಪೂರೈಕೆ ಎಂಬ ಹೇಳಿಕೆ ಸತ್ಯಕ್ಕೆ ದೂರ ಎಂದು ಸ್ಪಷ್ಟಪಡಿಸಿದ್ದಾರೆ.

    ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

    ಬೆಡ್​ ಬ್ಲಾಕ್​ ದಂಧೆಯ ಬ್ರಹ್ಮಾಂಡ ಬಿಚ್ಚಿಟ್ಟ ತೇಜಸ್ವಿ ಸೂರ್ಯ: ಭ್ರಷ್ಟಾಚಾರ ಅಲ್ಲ ಇದು ಮರ್ಡರ್… ಇವರೆಲ್ಲ ಹುಳ ಬಿದ್ದು ಸಾಯ್ತಾರೆ

    ಸ್ಮಶಾನದಲ್ಲೂ ಹೌಸ್​ಫುಲ್ ಬೋರ್ಡ್! ಶವಗಳ ಹೊತ್ತು ಕ್ಯೂ ನಿಂತ ಆಂಬುಲೆನ್ಸ್

    ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

    ನನ್ನ ಕಣ್ಮುಂದೆಯೇ ಹಲವರು ಪ್ರಾಣಬಿಟ್ಟರು, ನನಗೂ ಭಯವಾಗ್ತಿದೆ… ಎಂದು ಕರೆ ಮಾಡಿದ್ದ ನವವಿವಾಹಿತ 2 ತಾಸಲ್ಲೇ ಪ್ರಾಣಬಿಟ್ಟ

    ಅಪಘಾತ: ಸಾವಿನಲ್ಲೂ ಸಾರ್ಥಕತೆ ಮೆರೆದ ಚಿತ್ರದುರ್ಗ ಉಪವಿಭಾಗಾಧಿಕಾರಿ ವಿ.ಪ್ರಸನ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts