More

    ರಾಜಕೀಯಕ್ಕೂ ಅಲ್ಲು ಅರ್ಜುನ್​ಗೂ ಸಂಬಂಧವಿದೆ? ಪವನ್​ ಕಲ್ಯಾಣ್​ ಫ್ಯಾನ್ಸ್​ಗೂ ಸ್ಪಷ್ಟನೆ ಕೊಟ್ಟ ‘ಪುಷ್ಪರಾಜ್​’!

    ಆಂಧ್ರಪ್ರದೇಶ: ಟಾಲಿವುಡ್​ನ ಐಕಾನ್ ಸ್ಟಾರ್ ನಟ ಅಲ್ಲು ಅರ್ಜುನ್ ಇತ್ತೀಚೆಗೆ ತಮ್ಮ ಸ್ನೇಹಿತ ಮತ್ತು ವೈಎಸ್‌ಆರ್‌ಸಿಪಿ ಶಾಸಕ, ಲೋಕಸಭಾ ಅಭ್ಯರ್ಥಿ ರವಿಚಂದ್ರ ಕಿಶೋರ್ ರೆಡ್ಡಿಗೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ ನಂದ್ಯಾಲಕ್ಕೆ ಭೇಟಿ ನೀಡಿ, ಬಿರುಸಿನ ಪ್ರಚಾರದಲ್ಲಿ ಭಾಗಿಯಾಗಿದ್ದರು. ಸ್ಟಾರ್​ ನಟನ ಈ ನಡೆ ಪವನ್ ಕಲ್ಯಾಣ್ ಅಭಿಮಾನಿಗಳ ಭಾರೀ ಆಕ್ರೋಶಕ್ಕೆ ಗುರಿಯಾಯಿತು. ಅಲ್ಲು ವಿರುದ್ಧ ‘ಓಜಿ’ ಫ್ಯಾನ್ಸ್ ಸಿಡಿಮಿಡಿಗೊಂಡಿದ್ದರು.

    ಇದನ್ನೂ ಓದಿ: 1963ರಲ್ಲಿ 1 ಲೀಟರ್​ ಪೆಟ್ರೋಲ್​ ಎಷ್ಟಿತ್ತು ಗೊತ್ತಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

    ಅಲ್ಲು ಅರ್ಜುನ್​ ಪ್ರಚಾರ ಮಾಡಿದ್ದೇಕೆ? ಚುನಾವಣಾ ಪ್ರಚಾರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವ ಪ್ಲ್ಯಾನ್​ನಾ? ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾದಲ್ಲಿ ನಟನ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕಿದರು. ಇನ್ನು ಇಂದು ಹೈದರಾಬಾದ್​ನ ಜುಬ್ಲಿ ಹಿಲ್ಸ್​ನಲ್ಲಿ ಮತಯಾಚಿಸಲು ಬಂದ ಅಲ್ಲು ಅರ್ಜುನ್​, “ನನ್ನದು ಶುದ್ಧ ಸ್ನೇಹವೇ ಹೊರೆತು ರಾಜಕೀಯ ಉದ್ದೇಶವಲ್ಲ. ಅವರಿಗೆ ಚುನಾವಣೆಯಲ್ಲಿ ಶುಭವಾಗಲಿ ಎಂದು ಹರಸಲು ಮಾತ್ರ ಅಲ್ಲಿಗೆ ಬಂದೆ ಬಿಟ್ಟರೆ, ಇನ್ಯಾವುದೇ ಕಾರಣಕ್ಕೂ ಅಲ್ಲ” ಎಂದರು.

    ರಾಜಕೀಯಕ್ಕೆ ಎಂಟ್ರಿ ಕೊಡುವ ಮುನ್ಸೂಚನೆ ಇದಾಗಿರಬಹುದಾ? ಎಂಬ ಪ್ರಶ್ನೆಗೆ ಸ್ಮೈಲ್​ ಮಾಡುತ್ತಲೇ ‘ಇಲ್ಲ’ ಎಂದು ಉತ್ತರಿಸುವ ಮೂಲಕ ಸ್ಥಳದಿಂದ ಹೊರಟರು. ಸದ್ಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಪುಷ್ಪ 2’ ಚಿತ್ರದ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿರುವ ಸ್ಟೈಲಿಶ್ ಸ್ಟಾರ್​, ಆಗಸ್ಟ್​ 15ರಂದು ಪುಷ್ಪರಾಜ್ ಆಗಿ ಅಭಿಮಾನಿಗಳ ಮುಂದೆ ಗ್ರ್ಯಾಂಡ್ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ,(ಏಜೆನ್ಸೀಸ್).

    ಅಂದು ಆರ್​ಸಿಬಿ ಪ್ಲೇಆಫ್​ ಕನಸಿನ ಬಗ್ಗೆ ವಿಲ್​ ಜ್ಯಾಕ್ಸ್​ ನುಡಿದಿದ್ದ ಭವಿಷ್ಯ ಇಂದು ನಿಜವಾಗ್ತಿದೆ! ಏನು ಗೊತ್ತೇ?

    ಇದಕ್ಕೆಲ್ಲಾ ನನಗೆ ಕ್ಯಾಮರಾ ಬೇಕಿಲ್ಲ… ವಿಚ್ಛೇದನದ ಬಗ್ಗೆ ಕಡೆಗೂ ಮೌನ ಮುರಿದ ನಟಿ ಸಂಜೀದಾ ಶೇಖ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts