ಬಿಜೆಪಿ ಡ್ರಾಮಾ ಕಂಪನಿ, ಇಲ್ಲಿ ಒಬ್ಬೊಬ್ಬರದ್ದೂ ಒಂದೊಂದು ವೇಷ: ಕಾಂಗ್ರೆಸ್ ಆಕ್ರೋಶ

BJP Congress
Published on

ಬೆಂಗಳೂರು: ಬಿಜೆಪಿ ಎಂಬ ಡ್ರಾಮಾ ಕಂಪನಿಯಲ್ಲಿ ಒಬ್ಬೊಬ್ಬರದ್ದೂ ಒಂದೊಂದು ವೇಷ. ಒಬ್ಬರು ತೊಟ್ಟಿಲು ತೂಗುತ್ತಾರೆ, ಮತ್ತೊಬ್ಬರು ಚಿವುಟುತ್ತಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಸಾಮಾಜಿಕ ಜಾಲತಾಣ 'ಕೂ'ನಲ್ಲಿ ಸರಣಿ ಕೂ ಮಾಡಿರುವ ಕಾಂಗ್ರೆಸ್, ರಾಜ್ಯದಲ್ಲಿ ಕೋಮು ದ್ವೇಷ ಸ್ಥಾಪಿಸುತ್ತಿರುವ ಬಿಜೆಪಿ ನಾಯಕರು ಇದೇ ಸಂದರ್ಭವನ್ನು ತಮ್ಮೊಳಗಿನ #BJPvsBJP ಕಿತ್ತಾಟಕ್ಕೂ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

ಕಾಲೆಳೆಯುವ ಹೇಳಿಕೆಗಳಿಗೆ ರಾಷ್ಟ್ರವ್ಯಾಪಿ ಹೆಸರುವಾಸಿಯಾದ ಈಶ್ವರಪ್ಪ ಅವರು ಭಾರತದ ಕಲ್ಪನೆಯನ್ನು ಅವಮಾನಿಸುವ ಮೊದಲು ಎರಡು ಬಾರಿ ಯೋಚಿಸಲಿಲ್ಲ. ನಮ್ಮ ರಾಷ್ಟ್ರಧ್ವಜವನ್ನು ಕೇಸರಿಗೆ ಬದಲಾಯಿಸಬೇಕೆಂದು ಒತ್ತಾಯಿಸಿದರು, ನಾಜಿ ಮಂತ್ರಿ ಜೋಸೆಫ್ ಗೊಬೆಲ್ಸ್ ಹೆಮ್ಮೆಪಡುವಂತೆ ಮಾಡಿರುವ ಅರಗ ಜ್ಞಾನೇಂದ್ರ ಅವರು ಪ್ರತಿಯೊಂದು ವಿಷಯಕ್ಕೆ ಧಾರ್ಮಿಕ ಲೇಪನ ನೀಡಲು ಮತ್ತು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್​ ಲೇವಡಿ ಮಾಡಿದೆ.

ಜಾತ್ಯತೀತತೆಯ ಕಲ್ಪನೆಯೇ ಈ ಬಿಜೆಪಿ ನಾಯಕನಿಗೆ ಕೋಪ ತರಿಸುತ್ತದೆ. ಏಕತೆ ಮತ್ತು ವೈವಿಧ್ಯತೆಯ ಯಾವುದೇ ಚರ್ಚೆ ನಡೆಯುತ್ತಿದರೂ ಅಲ್ಲಿ ಹಿಂಸೆಯನ್ನು ಪ್ರಚೋದಿಸುವ ಮಾತುಗಳನ್ನಾಡುವುದರಲ್ಲಿ ನಳಿನ್ ಕುಮಾರ್ ಕಟೀಲ್ ನಿಸ್ಸೀಮರು ಎಂದು ಕಾಂಗ್ರೆಸ್ ಟೀಕಿಸಿದೆ.

ಆಕ್ರಮಣ ಮಾಡಲು ಬಿ.ಸಿ. ನಾಗೇಶ್ ಅವರಿಗೆ ಯಾವುದೇ ವಯಸ್ಸಿನ ಪರಿವಿಲ್ಲ. ಶಾಲಾ ಮಕ್ಕಳನ್ನು ಗುರಿಯಾಗಿಸಿಕೊಂಡು ಅವರು ಗುದ್ದಾಡಿದ್ದಾರೆ. ಶಿಕ್ಷಣಕ್ಕಿಂತ ಧರ್ಮವನ್ನೇ ಆರಿಸಿಕೊಳ್ಳಬೇಕು ಎಂದು ಹೇಳಿಕೊಟ್ಟಿದ್ದಾರೆ ಮತ್ತು ಇವರು ಕರ್ನಾಟಕದ ಶಿಕ್ಷಣ ಸಚಿವ ಎಂದು ಕಾಂಗ್ರೆಸ್​ ವ್ಯಂಗ್ಯವಾಡಿದೆ.

Koo App
Known nationwide for his foot-in-mouth statements, @k_s_eshwarappa didn’t think twice before insulting the idea of India, demanding that our national flag be replaced with saffron. #BJPCommunalGames (2/7)
View attached media content
-ಕರ್ನಾಟಕ ಕಾಂಗ್ರೆಸ್ (@inckarnataka)7 Apr 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net