More

    ಥೂ, ಇದೆಂಥಾ ಅಸಹ್ಯ? ಚೆನ್ನೈನಲ್ಲಿ ಮೂವರು ಬಾಲಕರ ಜತೆ ಗುಂಪು ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿ!

    ಚೆನ್ನೈ: ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬಳು ಮೂವರು ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವ ವಿಡಿಯೋ ವೈರಲ್​ ಆಗಿದ್ದು, ನಾಗರಿಕ ಸಮಾಜಕ್ಕೆ ಹಿರಿಸುಮುರಿಸು ಉಂಟು ಮಾಡಿದೆ. ಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕಿದ್ದ ಶಿಕ್ಷಕಿಯೇ ಅಪ್ರಾಪ್ತ ಬಾಲಕರನ್ನು ತನ್ನ ಮನೆಗೆ ಕರೆದೊಯ್ದು ಸೆಕ್ಸ್​ ಮಾಡಿದ್ದು, ಅಶ್ಲೀಲ ವಿಡಿಯೋವನ್ನ ಆಕೆಯ ಪ್ರಿಯಕರನೇ ಚಿತ್ರೀಕರಿಸಿ ಹರಿಯಬಿಟ್ಟಿದ್ದಾನೆ.

    ಇಂತಹ ಹೇಯ ಕೃತ್ಯ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಮಧುರೈನ ಸರ್ಕಾರಿ ಶಾಲೆಯೊಂದರ ಶಿಕ್ಷಕಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಶಿಕ್ಷಕಿಗೆ ಮದುವೆಯಾಗಿದ್ದು, ಗಂಡನಿಂದ ಬೇರ್ಪಟ್ಟಿದ್ದಾಳೆ. ಒಂಟಿಯಾಗಿದ್ದ ಶಿಕ್ಷಕಿಗೆ 2010ರಲ್ಲಿ ಉದ್ಯಮಿಯೊಬ್ಬನ ಜತೆ ಸ್ನೇಹ ಬೆಳೆದು, ಅನೈತಿಕ ಸಂಬಂಧ ಮುಂದುವರಿದಿತ್ತು. ಸದ್ಯ ಶಿಕ್ಷಕಿಯ ವಯಸ್ಸು 42. ಉದ್ಯಮಿ ವಯಸ್ಸು 39. ಇತ್ತೀಚಿಗೆ ತನ್ನ ಮನೆಗೆ 16 ವರ್ಷದ ಮೂವರು ಬಾಲಕರನ್ನು ಕರೆದುಕೊಂಡು ಬಂದ ಶಿಕ್ಷಕಿ ಅವರೊಂದಿಗೆ ಆಪ್ತತೆ ಬೆಳೆಸಿ ಖಾಸಗಿ ಕ್ಷಣಗಳನ್ನು ಕಳೆದಿದ್ದಾಳೆ. ಒಮ್ಮೆಲೆ ಮೂವರು ವಿದ್ಯಾರ್ಥಿಗಳನ್ನು ಮಂಚಕ್ಕೆ ಆಹ್ವಾನಿಸಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಲೈಂಗಿಕವಾಗಿಯೂ ಬಳಸಿಕೊಂಡಿದ್ದಾಳೆ. ಈ ದೃಶ್ಯವನ್ನ ಆಕೆಯ ಪ್ರಿಯಕರ ಸೆರೆ ಹಿಡಿದಿದ್ದು, ತನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ.

    ಮೂವರು ಅಪ್ರಾಪ್ತ ಬಾಲಕರ ಜತೆ ಶಿಕ್ಷಕಿಯ ಸೆಕ್ಸ್​ ವಿಡಿಯೋ ವೈರಲ್​ ಆಗಿದ್ದು, ತಮಿಳುನಾಡು ಸೈಬರ್ ಸೆಲ್ ತನಿಖೆ ಆರಂಭಿಸಿದೆ. ಹಣಕ್ಕಾಗಿ ಇಂತಹ ಕೃತ್ಯವೆಸಗಿ ವಿಡಿಯೋ ಚಿತ್ರೀಕರಿಸಿ ಅಶ್ಲೀಲ ತಾಣಗಳಿಗೆ ಅಪ್ಲೋಡ್ ಮಾಡಲಾಗಿದೆಯೇ ಅಥವಾ ಸ್ನೇಹಿತರಿಗಷ್ಟೇ ಕಳುಹಿಸಲಾಗಿದೆಯೇ ಎಂಬ ಬಗ್ಗೆ ನಡೆಯುತ್ತಿದೆ. ಅಪ್ರಾಪ್ತ ಬಾಲಕರು ಶಿಕ್ಷಕಿ ವಿರುದ್ಧ ದೂರು ನೀಡಿದ್ದು, ಮಧುರೈನ ದಕ್ಷಿಣ ಮಹಿಳಾ ಪೊಲೀಸ್ ಠಾಣೆಯಲ್ಲಿ ಶಿಕ್ಷಕಿ ಮತ್ತು ಪ್ರಿಯಕರನ ವಿರುದ್ಧ ಕೇಸ್​ ದಾಖಲಾಗಿದೆ.

    ಪ್ರೀತಿಸಿ ಮದ್ವೆಯಾದ 7 ದಿನಕ್ಕೇ ಯುವತಿ ಬೀದಿಪಾಲು! 3 ದಿನದಲ್ಲಿ 2 ಬಾರಿ ಮದ್ವೆ ಆಗಿದ್ದವ ಇದ್ದಕ್ಕಿದ್ದಂತೆ ಏನಾದ?

    ಕೆಲವೇ ದಿನದಲ್ಲಿ ಹಸಮಣೆ ಏರಬೇಕಿದ್ದ ಪೊಲೀಸ್​ ಪೇದೆ ದುರಂತ ಸಾವು! ಅಯ್ಯೋ, ವಿಧಿಯೇ ನೀನೆಷ್ಟು ಕ್ರೂರಿ?

    ಮೇಕೆ ಜೊತೆ ಯುವಕನ ಮದ್ವೆ! ಕುಟುಂಬಸ್ಥರ ಸಮ್ಮುಖದಲ್ಲೇ ತಾಳಿ ಕಟ್ಟಿದ… ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts