

ಬೆಂಗಳೂರು: ಜನರಲ್ ಇನ್ಸುರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಕಂಪನಿಯ ವಿವಿಧ ಘಟಕಗಳಲ್ಲಿ 10 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಇಂಡಿಯಾ ಹಾಗೂ ಅಬ್ರಾಡ್ಗಳಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಮಾತ್ರ ಅರ್ಜಿ ಸಲ್ಲಿಸಬೇಕು. ಮಾನ್ಯತೆ ಪಡೆದ ವಿವಿಯಲ್ಲಿ ವಿಜ್ಞಾನ/ಕಾಮರ್ಸ್/ಆಕ್ಚುರಿಸ್ ಸೈನ್ಸ್/ಡಿಪ್ಲೊಮಾ ವಿಭಾಗದಲ್ಲಿ ಶೇ.60 ಅಂಕದೊಂದಿಗೆ ಪದವಿ ಪಡೆದಿರಬೇಕು. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಶೇ.10 ರಿಯಾಯಿತಿ ಇರಲಿದೆ.
ಭಾರತೀಯ ಆಕ್ಚುರಿಸ್ ಇನ್ಸ್ಟಿಟ್ಯೂಟ್/ಯುಕೆಯ ಫ್ಯಾಕಲ್ಟಿ ಆಫ್ ಆಕ್ಯುರೇಟ್ಸ್ ಸಂಸ್ಥೆಯಲ್ಲಿ ಅಧ್ಯಯನ ಮಾಡಿದವರಿಗೆ ಆದ್ಯತೆ ನೀಡಲಾಗಿದೆ. ಪ್ರಥಮ ವರ್ಷ 30,000, ದ್ವಿತೀಯ ವರ್ಷ 35,000 ರೂ. ಸ್ಟೈಪೆಂಡ್ ನೀಡಲಾಗುವುದು. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ಗುಂಪು ಚರ್ಚೆ ಅಥವಾ ಸಂದರ್ಶನದ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 22/4/2022
ಅಧಿಸೂಚನೆಗೆ: https://bit.ly/37QAR7m
ಮಾಹಿತಿಗೆ: https://www.gicofindia.com/en/