ಚಾರ್ಮಾಡಿ ಘಾಟ್​ನಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ, ಘನ ವಾಹನ ಸಂಚಾರಕ್ಕೆ ನಿರ್ಬಂಧ

charmudi ghat
Published on

ಚಿಕ್ಕಮಗಳೂರು: ಮಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಕಿಮೀ 86.200 ರಿಂದ ಕಿಮೀ 99.200 (ಕೊಟ್ಟಿಗೆಹಾರ) ವರೆಗಿನ ಚಾರ್ಮಾಡಿ ಘಾಟ್​ ರಸ್ತೆಯ ಮಾರ್ಗದಲ್ಲಿ ದಿನದ 24 ಗಂಟೆಯೂ ಲಘು ವಾಹನ ಹಾಗೂ ಲಘು ವಾಣಿಜ್ಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಎಲ್ಲಾ ರೀತಿಯ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ದಿನದ 24 ಗಂಟೆ ಕೆಎಸ್​ಆರ್​ಟಿಸಿ ಕೆಂಪು ಬಸ್​, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೋ ಟ್ರಾವೆಲರ್​, ಆಂಬುಲೆನ್ಸ್​, ಕಾರು, ಜೀಪು, ವ್ಯಾನ್​, ಎಲ್​ಸಿವಿ (ಮಿನಿ ವ್ಯಾನ್​) ಹಾಗೂ ದ್ವಿಚಕ್ರ ವಾಹನಗಳು ಸಂಚರಿಸಬಹುದು.

ಬುಲೆಟ್​ ಟ್ಯಾಂಕರ್ಸ್​, ಷಿಪ್​ ಕಾಗೋರ್, ಕಂಟೈನರ್ಸ್​, ಲಾಂಗ್​ ಚಾಸಿಸ್​ ವಾಹನಗಳು, ಹೆವಿ ಕಮರ್ಷಿಯಲ್​ ವಾಹನ, ಮಲ್ಟಿ ಏಕ್ಸೆಲ್​ ವಾಹನಗಳು, ಟ್ರಕ್​ ಟೆಲರ್​, ಕೆಎಸ್​ಆರ್​ಟಿಸಿ ರಾಜಹಂಸ, ಸ್ಲೀಪರ್​ ಬಸ್​ಗಳು ಮತ್ತು ಎಲ್ಲ ಬಗೆಯ ಅಧಿಕ ಭಾರದ ಸರಕು ಸಾಗಾಣೆ ವಾಹನಗಳನ್ನು ಈ ಮಾರ್ಗದಲ್ಲಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್​. ರಮೇಶ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net