ವರದಕ್ಷಿಣೆ ಕಿರುಕುಳ: ಮದ್ವೆಯಾದ 18 ದಿನಕ್ಕೆ ಗಂಡನ ಮನೆಯಲ್ಲಿ ದುರಂತ ಅಂತ್ಯ ಕಂಡ ಯುವತಿ!

New Project (25)
Published on

ಹಾಸನ: ನೂರಾರು ಕನಸಿನ ಬುತ್ತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವತಿ ಮದ್ವೆಯಾದ 18 ದಿನಕ್ಕೇ ಗಂಡನ ಮನೆಯಲ್ಲಿ ದುರಂತ ಅಂತ್ಯ ಕಂಡಿದ್ದಾಳೆ.

ಇಂತಹ ದುರ್ಘಟನೆ ಹಾಸನದ ಸಲೀಂ ನಗರದಲ್ಲಿ ಸಂಭವಿಸಿದೆ. ಅರಕಲಗೂಡು ತಾಲೂಕಿನ ಹೊಳಲಗೋಡು ಗ್ರಾಮದ ಫಿಜಾ ಖಾನಂ(22) ಮೃತ ದುರ್ದೈವಿ. ಹಾಸನದ ಶಾಗಿಲ್ ಅಹಮದ್ ಎಂಬಾತನ ಜತೆ ಫಿಜಾ ಖಾನಂಳ ಮದುವೆ ಡಿಸೆಂಬರ್ 2ರಂದು ನೆರವೇರಿತ್ತು. ಮಗಳು -ಅಳಿಯ ಚೆನ್ನಾಗಿದ್ದಾರೆ ಅಂದುಕೊಂಡಿದ್ದ ಪಾಲಕರಿಗೆ ಡಿ.19ರಂದು ಫಿಜಾ ಖಾನಂ ಇನ್ನಿಲ್ಲ ಎಂಬ ಆಘಾತಕಾರಿ ಸುದ್ದಿ ಬಂದೆರಗಿತ್ತು.

ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮೃತಳ ಪಾಲಕರು ಅಳಿಯ ಮತ್ತು ಈತನ ಕುಟುಂಬಸ್ಥರ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ ಬಾಗಿಲು ಮುಚ್ಚಿ ಕೊಲೆ ಮಾಡಿದ್ದಾರೆ. ವರದಕ್ಷಿಣೆ ತರುವಂತೆ ಕಿರುಕುಳ ಕೊಟ್ಟು ಸಾಯಿಸಿದ್ದಾರೆ ಎಂದು ಮೃತಳ ಪಾಲಕರು ಆರೋಪಿಸಿದ್ದಾರೆ. ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net