ಅಳಿಯನ ಜತೆ ಸಾವಿನ ಮನೆಯ ಕದ ತಟ್ಟಿದ ಅಮ್ಮ-ಮಗಳು! ನಿನ್ನೆ ರಾತ್ರಿ ಮಾಗಡಿಯಲ್ಲಿ ನಡೀತು ಭೀಕರ ದುರಂತ

New Project (21)
Published on

ಮಾಗಡಿ: ಕೌಟುಂಬಿಕ ‌ಕಲಹ ಹಿನ್ನೆಲೆ ಕೆರೆಗೆ ಹಾರಿ ಅಮ್ಮ-ಮಗಳು-ಅಳಿಯ ದುರಂತ ಅಂತ್ಯ ಕಂಡ ದುರ್ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ದಮ್ಮನಕಟ್ಟೆ ಗ್ರಾಮದಲ್ಲಿ ಸಂಭವಿಸಿದೆ. ಓರ್ವ ಬಾಲಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಮತ್ತೊಬ್ಬ ಬಾಲಕಿ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಸಿದ್ದಮ್ಮ(55), ಈಕೆಯ ಮಗಳು ಸುಮಿತ್ರಾ(30), ಸುಮಿತಾಳ ಗಂಡ ಹನುಮಂತ ರಾಜು(35) ಮೃತ ದುರ್ದೈವಿಗಳು. ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡು ಅತ್ತೆ ಮನೆಯಲ್ಲೇ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಹನುಮಂತರಾಜು ವಾಸವಿದ್ದ.

ಕುಡಿತದ ಚಟ ಅಂಟಿಸಿಕೊಂಡಿದ್ದ ಹನುಮಂತರಾಜು ಮಂಗಳವಾರ ರಾತ್ರಿ ಕುಡಿದು ಮನೆಗೆ ಬಂದಿದ್ದ. ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು, ಕುಟುಂಬದ ಐವರೂ ಕೆರೆಗೆ ಬಳಿ ಹೋಗಿದ್ದಾರೆ. ಅಲ್ಲೂ ಜಗಳವಾಡುತ್ತಲೇ ಅತ್ತೆ ಸಿದ್ದಮ್ಮ, ಪತ್ನಿ ಸುಮಿತ್ರಾ, 11 ವರ್ಷದ ಮಗಳು ಕೀರ್ತನಾ ಜತೆ ಹನುಮಂತರಾಜು ಕೆರೆಗೆ ಹಾರಿದ್ದಾನೆ. ಮತ್ತೋರ್ವ ಪುತ್ರಿ 11 ವರ್ಷದ ಚಂದನಾ ನೀರಿಗೆ ಹಾರದೆ ಭಯದಿಂದ ಗ್ರಾಮಕ್ಕೆ ಓಡಿಬಂದು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಜನರು ರಕ್ಷಣೆಗಾಗಿ ಕೆರೆ ಬಳಿ ಹೋದರಾದರೂ ಮಗಳು-ಅಳಿತ-ಅತ್ತೆ ಮೃತಪಟ್ಟಿದ್ದರು. ಬಾಲಕಿ ಸುಮಿತ್ರಾ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net