ಭೀಕರ ಅಪಘಾತ: ಸ್ಥಳದಲ್ಲೇ ಮದುಮಗಳು ಸಾವು, ಮದುಮಗ ಸೇರಿ 7 ಜನರ ಸ್ಥಿತಿ ಗಂಭೀರ

accident
Published on

ವಿಜಯಪುರ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಭ್ರಮದಲ್ಲಿ ಮುಳುಗಿದ್ದ ನವಜೋಡಿಯ ಬಾಳಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಕುಟುಂಬಸ್ಥರೊಂದಿಗೆ ದೇವರ ದರ್ಶನಕ್ಕೆಂದು ತೆರಳುವ ಮಾರ್ಗಮಧ್ಯೆ ಟೆಂಪೋ ಮತ್ತು ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮದುಮಗಳು ಮೃತಪಟ್ಟಿದ್ದಾಳೆ.

ಇಂತಹ ದುರ್ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಿ.ಕೆ. ಯರಗಲ್ ಬಳಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ರಾಣಿ ಚವ್ಹಾಣ(26) ಮೃತ ದುರ್ದೈವಿ. ನವವಿವಾಹಿತ ಗಣೇಶ ಸೇರಿ 7 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಇವರೆಲ್ಲರೂ ಕಲಬುರಗಿ ಜಿಲ್ಲೆ ಶಂಕರವಾಡಿ ನಿವಾಸಿಗಳು.

ಶುಕ್ರವಾರ ಬೆಳಗ್ಗೆ ನವ ವಿವಾಹಿತ ದಂಪತಿಯನ್ನು ಕೊಕಟನೂರ ದೇವಸ್ಥಾನಕ್ಕೆ ಕುಟುಂಬಸ್ಥರು ಕರೆದೊಯ್ಯುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ನವವಿವಾಹಿತೆ ಸ್ಥಳದಲ್ಲೇ ದುರಂತ ಅಂತ್ಯ ಕಂಡಿದ್ದಾಳೆ. ಗಾಯಾಳುಗಳನ್ನು ಸಿಂದಗಿ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net