ವಿದ್ಯಾರ್ಥಿ ವೇತನಕ್ಕೆ ಆಧಾರ್​ ಸೀಡಿಂಗ್​ ಕಡ್ಡಾಯ

adhar card
Published on

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿದ್ಯಾಥಿರ್ಗಳಿಗೆ ನೀಡುವ ಪ್ರೋತ್ಸಾಹಧನವನ್ನು ಖಾತೆಗೆ ಜಮಾ ಮಾಡಲು ಆಧಾರ್​ ಕಾರ್ಡ್​ ಮತ್ತು ಬ್ಯಾಂಕ್​ ಖಾತೆ ಜೋಡಣೆ ಮಾಡಿರುವ ಖಾತೆ ವಿವರವನ್ನೇ ನೀಡಬೇಕೆಂದು ವಿದ್ಯಾಥಿರ್ಗಳಿಗೆ ಇಲಾಖೆ ಸೂಚಿಸಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿದ್ಯಾಸಿರಿ, ಮೆರಿಟ್​ ಸ್ಕಾಲರ್​ಶಿಪ್​, ಶುಲ್ಕ ವಿನಾಯಿತಿ ಇತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಅರ್ಜಿ ಸಲ್ಲಿಸುವವರು ಆಧಾರ್​ ಸಂಖ್ಯೆಯನ್ನು ಬ್ಯಾಂಕ್​ ಖಾತೆಗೆ ಜೋಡಿಸಿ ನ್ಯಾಷನಲ್​ ಪೇಮೆಂಟ್ಸ್​ ಕಾರ್ಪೋರೇಷನ್​ ಇಂಡಿಯಾಗೆ ಲಿಂಕ್​ ಮಾಡಿಸುವಿಕೆ ಕಡ್ಡಾಯ.

ಇಲ್ಲವಾದರೆ, ವಿದ್ಯಾರ್ಥಿ ವೇತನವು ಬ್ಯಾಂಕ್​ ಖಾತೆ ಜಮಾ ಆಗುವುದಿಲ್ಲ. ಈ ಹಿನ್ನೆಲೆ ಕೂಡಲೇ ಬ್ಯಾಂಕ್​ ಖಾತೆ ಆಧಾರ್​ ಕಾರ್ಡ್​ಗೆ ಜೋಡಣೆ ಮಾಡಬೇಕಿದೆ. ಬೆಂಗಳೂರು ವಿಭಾಗದವರು ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9986872438, 9980119017 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net