ಮದ್ವೆ ಆಗ್ತೀನಂತ 2 ವರ್ಷದಿಂದ ಸಹ ನಟಿಯನ್ನ ದೈಹಿಕವಾಗಿ ಬಳಸಿಕೊಂಡ ಕೇಸ್​: ಸ್ಯಾಂಡಲ್​​​​​​​​ವುಡ್​ ನಟ-ನಿರ್ಮಾಪಕ ಜೈಲು ಪಾಲು

fraud
Published on

ಬೆಂಗಳೂರು: ಸಿನಿಮಾ ಸಹ ನಟಿಯೊಬ್ಬರಿಗೆ ಮದ್ವೆ ಆಗುವ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ಆಕೆಗೆ ವಂಚಿಸಿದ ಪ್ರಕರಣದಲ್ಲಿ ಸ್ಯಾಡಂಲ್​ವುಡ್​ನ ನಟ ಮತ್ತು ನಿರ್ದೇಶಕರೊಬ್ಬರನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.

ನಿರ್ಮಾಪಕ ಟಿ.ಜಿ. ಹರ್ಷವರ್ಧನ್​ ಅಲಿಯಾಸ್​ ವಿಜಯ ಭಾರ್ಗವ್​ ಬಂಧನಕ್ಕೊಳಗಾದವ. ‘ವಿಷನ್​ 2023’ ಎಂಬ ಸಿನಿಮಾದ ಹೀರೋ ಕಮ್​ ನಿರ್ಮಾಪಕ ಆಗಿರುವ ಹರ್ಷವರ್ಧನ್​ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ನಟಿ ದೂರು ದಾಖಲಿಸಿದ್ದಾರೆ.

'ನನ್ನನ್ನು ಮದುವೆ ಆಗ್ತೀನಿ ಅಂತ ಹರ್ಷವರ್ಧನ್​ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ನೀನೇ ನನ್ನ ಹೆಂಡತಿ ಎಂದು ನಂಬಿಸಿದ್ದ. ಕಳೆದ 2 ವರ್ಷದಿಂದ ನನ್ನನ್ನು ದೈಹಿಕವಾಗಿ ಬಳಸಿಕೊಂಡ. ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದ. ಇತ್ತೀಚಿಗೆ ಮದುವೆ ಆಗೋಣ ಎಂದು ನಾನು ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net