81ರ ವೃದ್ಧೆಗೆ 46 ವರ್ಷದ ವ್ಯಕ್ತಿಯ ಜತೆ ಮದುವೆ! ಮದುವೆಯಾದರೂ ಒಂದಾಗಲಿಲ್ಲ ಈ ಜೋಡಿ

marriage
Published on

ಲಂಡನ್​: 81 ವರ್ಷದ ವೃದ್ಧೆಯೊಬ್ಬರು 46 ವರ್ಷದ ವ್ಯಕ್ತಿಯನ್ನು ಮದುವೆಯಾಗಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಮದುವೆಯಾದರೂ ಈ ದಂಪತಿ ಒಟ್ಟಿಗೆ ಬದುಕಲಾಗುತ್ತಿಲ್ಲವೆಂದು ಇದೀಗ ವೃದ್ಧೆ ಕಣ್ಣೀರು ಸುರಿಸುತ್ತಿದ್ದಾರೆ.

ಐರಿಸ್​ ಜೋನ್ಸ್​ ಹೆಸರಿನ ವೃದ್ಧೆ ಬ್ರಿಟನ್​ನಲ್ಲಿ ವಾಸವಿದ್ದಾರೆ. ಈಕೆ ಫೇಸ್​ಬುಕ್​ನಲ್ಲಿ ಈಜಿಪ್ಟ್​ನ ಮೊಹಮ್ಮದ್​ ಅಹ್ಮದ್​ ಹೆಸರಿನ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಾರೆ. ಕೆಲವೇ ದಿನಗಳಲ್ಲಿ ಸ್ನೇಹ ಪ್ರೀತಿಗೆ ತಿರುಗಿದ್ದು, ಈಜಿಪ್ಟ್​ಗೆ ಹೋದ ಐರಿಸ್​ ಮೊಹಮ್ಮದ್​ರನ್ನು ಮದುವೆಯಾಗಿದ್ದಾರೆ. ನಂತರ ಅಲ್ಲಿನ ಹವಾಮಾನಕ್ಕೆ ಇಳಿ ವಯಸ್ಸಿನ ದೇಹ ಹೊಂದಿಕೊಳ್ಳದ ಕಾರಣ ಬ್ರಿಟನ್​ಗೆ ವಾಪಾಸಾಗಿದ್ದಾರೆ. ಆದರೆ ಮೊಹಮ್ಮದ್​ಗೆ ಬ್ರಿಟನ್​ಗೆ ಬರಲು ಸಾಧ್ಯವಾಗಿಲ್ಲ. ಅವರ ಬ್ರಿಟನ್​ ವೀಸಾ ಪಡೆಯುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ತಮ್ಮ ಹೆಂಡತಿಯೊಂದಿಗೆ ಬದುಕಲು ಸಾಧ್ಯವಾಗುತ್ತಿಲ್ಲ.

ಮದುವೆಯಾದರೂ ಬ್ರಿಟನ್​ನಲ್ಲಿ ಒಬ್ಬಂಟಿ ಜೀವನ ನಡೆಸುತ್ತಿರುವ ಐರಿಸ್​ ಸಾಕಷ್ಟು ಬಾರಿ ಕಣ್ಣೀರು ಹಾಕಿದ್ದಾರಂತೆ. ನನಗೆ ವಯಸ್ಸಾಗಿದೆ. ಇಂದು ಅಥವಾ ನಾಳೆ ಸಾಯಬಹುದು. ನನ್ನ ಗಂಡ ನನ್ನ ಬಳಿ ಬರುವುದರೊಳಗೆ ನಾನು ಸತ್ತೇ ಹೋದರೆ ಎನ್ನುವ ಭಯವಿದೆ. ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ ಅವರು ದಯಮಾಡಿ ನನ್ನ ಗಂಡನಿಗೆ ವೀಸಾ ಸಿಗಲು ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ ಐರಿಸ್​. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net