ಪಾತ್ರೆ ತೊಳೆಯುತ್ತಿರುವಾಗ ಮೈ ಮೇಲೆ ಎಗರಿದ ಕೋತಿಗಳ ಹಿಂಡು; 70 ವರ್ಷದ ವೃದ್ಧೆ ನಿಧನ

monkey
ಸಾಂದರ್ಭಿಕ ಚಿತ್ರ
Published on

ತೆಲಂಗಾಣ: ವೃದ್ಧೆಯೊಬ್ಬರು ಪಾತ್ರೆ ತೊಳೆಯುತ್ತಿರುವಾಗ 20ಕ್ಕೂ ಹೆಚ್ಚು ಕೋತಿಗಳ ಹಿಂಡು ದಾಳಿ ನಡೆಸಿವೆ. ಈ ದಾಳಿಗೆ ಸಿಲುಕಿ ವೃದ್ಧೆ ಸಾವಿಗೀಡಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಚಟರಬೋಯಿನಾ ನರಸವ್ವ(70) ಮೃತ ದುರ್ದೈವಿ. ಈಕೆ ಕಾಮರೆಡ್ಡಿ ಜಿಲ್ಲೆಯ ರಾಮರೆಡ್ಡಿ ಗ್ರಾಮದ ನಿವಾಸಿಯಾಗಿದ್ದಳು. 20ಕ್ಕೂ ಹೆಚ್ಚು ಕೋತಿಗಳ ಹಿಂಡಿನ ದಾಳಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾರೆ.

ಮಹಿಳೆ ತನ್ನ ಮನೆಯಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಕೋತಿಗಳು ದಾಳಿ ಮಾಡಿವೆ. ಮಂಗಗಳು ಅಲ್ಲಿಂದ ತೆರಳುವವರೆಗೂ ನೆರೆಹೊರೆಯವರು ಬಾಗಿಲು ಹಾಕಿಕೊಂಡು ಮನೆಯೊಳಗೆ ಹೋಗಿದ್ದಾರೆ. ದಾಳಿಯಿಂದಾಗಿ ವೃದ್ಧೆಯ ಎದೆ, ಬೆನ್ನು ಮತ್ತು ಕೈಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಸ್ವಲ್ಪ ಸಮಯದ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನರಸವ್ವ ಶನಿವಾರ ಮೃತಪಟ್ಟಿದ್ದಾರೆ.

ಕಿರಿಯ ಮಗಳು ಸುಗುಣ ಮದುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದರಿಂದ ಸಂತ್ರಸ್ತೆ ಮನೆಯಲ್ಲಿ ಒಬ್ಬರೇ ಇದ್ದರು. ನರಸವ್ವ ಸಹಾಯಕ್ಕಾಗಿ ಕೂಗಿಕೊಂಡರೂ, ಭಯಭೀತರಾದ ನೆರೆಹೊರೆಯವರು ಆಕೆಯನ್ನು ರಕ್ಷಿಸಲು ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net