ನರೇಂದ್ರ ಮೋದಿ ಹತ್ಯೆಗೆ ಸ್ಕೆಚ್​: 20 ಕೆಜಿ RDX ಸ್ಫೋಟಿಸುವುದಾಗಿ ಸಂದೇಶ ರವಾನೆ

Modi
Published on

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಸಮಾಜಘಾತುಕ ಶಕ್ತಿಗಳು ಇ-ಮೇಲ್​ ಮೂಲಕ ಬೆದರಿಕೆ ಹಾಕಿರುವ ಸ್ಫೋಟಕ ಮಾಹಿತಿಯನ್ನ ಕೇಂದ್ರದ ಗುಪ್ತಚರ ಸಂಸ್ಥೆ ಬಹಿರಂಗ ಮಾಡಿದೆ.

ಅನಾಮಧೇಯ ವ್ಯಕ್ತಿಯಿಂದ ಮುಂಬೈನಲ್ಲಿರುವ ನ್ಯಾಷನಲ್​ ಇನ್ವೆಸ್ಟಿಗೇಶನ್​ ಸಂಸ್ಥೆಗೆ ಮೇಲ್​ ಬಂದಿದೆ. 'ಮೋದಿ ನನ್ನ ಜೀವನ ಹಾಳು ಮಾಡಿದ್ದಾರೆ. ನನ್ನ ರೀತಿಯಲ್ಲೇ ಹಲವರು ಸಂಕಷ್ಟದಲ್ಲಿದ್ದಾರೆ. ಮೋದಿಯನ್ನು ಮುಗಿಸುವುದೇ ನನ್ನ ಗುರಿ. 20 ಸ್ಲೀಪರ್​ ಸೆಲ್​ಗಳು ಸಕ್ರಿಯವಾಗಿವೆ. ಮೋದಿ ಹತ್ಯೆಗೆ 20 ಕೆಜಿ RDX ಬಳಸಲಾಗುತ್ತೆ. ದೇಶಾದ್ಯಂತ 20 ಕಡೆ RDX ಸ್ಫೋಟಿಸಿ 2 ಕೋಟಿಗೂ ಅಧಿಕ ಜನರನ್ನು ಬಲಿ ತೆಗೆದುಕೊಳ್ಳುತ್ತೇನೆ. ನಿಮ್ಮಲ್ಲಿ ತಡೆಯುವ ತಾಕತ್ತು ಇದ್ದರೆ ತಡೆಯಿರಿ' ಎಂದು ಸಂದೇಶ ರವಾನಿಸಿದ್ದಾನೆ. ತನಿಖಾ ದಳ ಅಲರ್ಟ್​ ಆಗಿದ್ದು, ಇಮೇಲ್​ ಮಾಡಿದವನ ಜಾಡು ಹಿಡಿದು ಕಾರ್ಯಾಚರಣೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net