

ಮುಂಬೈ: ರೆಸ್ಟೋರೆಂಟ್ವೊಂದರಲ್ಲಿ ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿದ್ದ 28 ಮಹಿಳೆಯರು ಸೇರಿ, ಒಟ್ಟು 97 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ರೆಸ್ಟೋರೆಂಟ್ನ ಮ್ಯಾನೇಜರ್, ಮೂವರು ವೇಟರ್ಗಳನ್ನೂ ಬಂಧಿಸಲಾಗಿದೆ. ಆದರೆ ನಂತರ ಮಹಿಳೆಯರನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹುಂಜ ಕೂಗಿದ್ದಕ್ಕೆ ₹14 ಸಾವಿರ ದಂಡ ಹಾಕಿದ ಪೊಲೀಸರು- ಕಾರಣ ವಿಚಿತ್ರ!
ಬಾಂಬೆ ಬ್ರ್ಯೂಟ್ ಎಂಬ ರೆಸ್ಟೋರೆಂಟ್ನಲ್ಲಿ ಅಶ್ಲೀಲ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಅಷ್ಟು ಮುಂಜಾನೆ ಸಮಯದಲ್ಲಿ ಅಲ್ಲಿ ಮದ್ಯದ ಪಾರ್ಟಿ ಭರ್ಜರಿ ನಡೆಯುತ್ತಿತ್ತು. ನೃತ್ಯ ಮಾಡುತ್ತಿದ್ದರು. ಇಲ್ಲಿ ಬಂಧಿಸಲ್ಪಟ್ಟವರೆಲ್ಲ ಮುಂಬೈನ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರೇ ಆಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಈ ರೆಸ್ಟೋರೆಂಟ್ನ್ನು ಮತ್ತೆ ತೆರೆಯಲಾಗಿದೆ. ಇದರ ಮ್ಯಾನೇಜರ್ ಖುದ್ದು ಒಂದಷ್ಟು ಜನರಿಗೆ ಕರೆ ಮಾಡಿ ಇಲ್ಲಿಗೆ ಕರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಯುವತಿಯರು, ಮಹಿಳೆಯರನ್ನು ಮಾತ್ರ ಬಿಡುಗಡೆ ಮಾಡಲಾಗಿದ್ದು, ಉಳಿದವರು ನಮ್ಮ ವಶದಲ್ಲಿ ಇದ್ದಾರೆ. ಕೆಲವು ಪ್ರಕರಣಗಳಡಿ ಕೇಸ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)