

ಕರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಅಲ್ಲಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದ ಮೇಲೆ ಮೊದಲಿನಷ್ಟೇ ಲವಲವಿಕೆಯಿಂದ ತಮ್ಮ ನಿತ್ಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ನಿನ್ನೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ, ರಾಜ್ಯದ ಜನರನ್ನು ಉದ್ದೇಶಿಸಿ ಮಾತನ್ನೂ ಆಡಿದ್ದಾರೆ.
ಇಂದು ಬೆಳಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ತಮ್ಮ ನಿವಾಸದಲ್ಲಿರುವ ಮುದ್ದು ಕರುಗಳಾದ ನಂದೀಶ ಮತ್ತು ಬಸವನನ್ನು ಪರಿಚಯಿಸಿದ್ದಾರೆ. ಯಡಿಯೂರಪ್ಪನವರಿಗೆ ಗೋವುಗಳೆಂದರೆ ಪ್ರೀತಿ ಎಂಬುದು ಗೊತ್ತಿರುವ ವಿಷಯ. ಇಂದು ಟ್ವೀಟ್ ಮಾಡಿದ ಅವರು, ನನ್ನ ದಿನಚರಿ ಪ್ರಾರಂಭ ಆಗುವುದೇ ನಡಿಗೆಯ ಮೂಲಕ. ಆಗ ಎದುರಾಗುವ ಮುದ್ದಿನ ಕರುಗಳಾದ ನಂದೀಶ ಮತ್ತು ಬಸವನ ಮೈ ತಡವದೆ ನಡಿಗೆ ಪೂರ್ಣವಾಗುವುದಿಲ್ಲ. ಮೂಕ ಪ್ರಾಣಿಗಳ ಪ್ರೀತಿ, ಅಕ್ಕರೆಗಳ ಅಭಿವ್ಯಕ್ತಿ ಹೃದಯ ಮುಟ್ಟುತ್ತದೆ ಎಂದಿದ್ದಾರೆ. ಫೋಟೋವನ್ನೂ ಶೇರ್ ಮಾಡಿಕೊಂಡಿದ್ದಾರೆ.