'ಪ್ರೀಶಾ ಚಕ್ರವರ್ತಿ' ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ

america
Published on

ವಾಷಿಂಗ್ಟನ್​: ಭಾರತೀಯ-ಅಮೆರಿಕನ್​ ಶಾಲಾ ಬಾಲಕಿ 9 ವರ್ಷದ ಪ್ರೀಶಾ ಚಕ್ರವರ್ತಿ ವಿಶ್ವದ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ.

ಪ್ರೀಷಾ ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ವಾರ್ಮ್ ಸ್ಪ್ರಿಂಗ್ ಎಲಿಮೆಂಟರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಗ್ರೇಡ್ 3 ವಿದ್ಯಾರ್ಥಿಯಾಗಿ 2023 ರ ಬೇಸಿಗೆಯಲ್ಲಿ ಯುಎಸ್ ಮೂಲದ ಜಾನ್ಸ್ ಹಾಪ್‌ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ ಪರೀಕ್ಷೆಯನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ.

ಅಮೆರಿಕಾ ಪ್ರತಿಷ್ಠಿತ ಜಾನ್ಸ್​ ಹಾಪ್ಕಿನ್ಸ್​ ಸೆಂಟರ್ ಫಾರ್​ ಟ್ಯಾಲೆಂಟೆಡ್​ ಯೂತ್​ ಸೆಂಟರ್​ ಫಾರ್ ಟ್ಯಾಲೆಂಟೆಡ್​ ಯೂತ್​ ಸಂಸ್ಥೆಯ 90 ದೇಶಗಳ ಸುಮಾರು 16 ಸಾವಿರ ವಿದ್ಯಾರ್ಥಿಗಳ ಪರೀಕ್ಷೆಗಳ ಫಲಿತಾಂಶಗಳ ಮೌಲ್ಯಮಾಪನ ಮಾಡಿದ ನಂತರ ಪ್ರೀಷಾ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ಸೆಂಟರ್ ಫಾರ್ ಟ್ಯಾಲೆಂಟೆಡ್ ಯೂತ್ ತಿಳಿಸಿದೆ.

13 ವರ್ಷದ ಭಾರತೀಯ-ಅಮೆರಿಕನ್ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಂ ಅವರು ಈ ಹಿಂದೆ ಸತತ ಎರಡನೇ ವರ್ಷ ವಿಶ್ವದ ಪ್ರಕಾಶಮಾನವಾದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.

ಅದರಂತೆ ಕ್ಯಾಲಿಪೋರ್ನಿಯಾದ ವಾರ್ಮ್​ ಸ್ಟ್ರಿಂಗ್​ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿರುವ ಪ್ರೀಶಾ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಜಗತ್ತಿನಲ್ಲೇ ಅತೀ ಬುದ್ಧಿವಂತಯಾಗಿ ಹೊರಹೊಮ್ಮಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net