

ಸಾಲಿಗ್ರಾಮ: ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 2023-24ನೇ ಸಾಲಿನಲ್ಲಿ ರೈತರಿಗೆ 9,29,74,000 ರೂ. ಸಾಲ ವಿತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಚ್.ಎನ್.ವಿಜಯ್ ಹೇಳಿದರು.
ಮಂಗಳವಾರ ನಡೆದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಸದಸ್ಯರು ಪಾರದರ್ಶಕ ವ್ಯವಹಾರಕ್ಕೆ ಕೈಜೋಡಿಸಬೇಕು ಎಂದು ಮನವಿಮಾಡಿದರು.
ರೈತರಿಗೆ ಸಂಘದಿಂದ ಯಾವುದೇ ರೀತಿಯ ತೊಂದರೆಯಾದರೆ, ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ನಷ್ಟದಲ್ಲಿದ್ದ ಸಂಘವನ್ನು ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಲಾಭದ ಹಾದಿಯಲ್ಲಿ ಕೊಂಡೊಯ್ಯಲಾಗಿದೆ. ಸದ್ಯ ಸಂಘ 3,14,155 ರೂ. ನಿವ್ವಳ ಲಾಭಗಳಿಸಿದೆ ಎಂದರು.
ಉಪಾಧ್ಯಕ್ಷ ಬಿ.ಸಿ.ಯೋಗೇಶ್, ನಿರ್ದೇಶಕ ಕೆ.ಬಿ.ನಟರಾಜು, ಸಿ.ಸುಂದರ್, ಎಸ್.ಶಂಕರಯ್ಯ, ಟಿ.ರವಿ, ಲೋಕೇಶನಾಯಕ, ಕುಮಾರ, ರವಿ, ಜಿಲ್ಲಾ ಬ್ಯಾಂಕಿನ ಪ್ರತಿನಿಧಿ ಬಸವರಾಜು, ಪ್ರಭಾರ ಸಿಇಒ ಎಸ್.ಎಸ್.ದುಷ್ಯಂತ್, ಸಿಬ್ಬಂದಿ ಸಂಪತ್ ಕುಮಾರ್, ಪುಷ್ಪಲತಾ, ಅಶೋಕ, ಎಚ್.ಬಿ.ಪ್ರಭು, ತಿಮ್ಮನಾಯಕ, ನಟರಾಜ್, ನಟರಾಜ್, ರಾಜೇಗೌಡ, ಕೃಷ್ಣೆಗೌಡ, ಜ್ಯೋತಿಪ್ರಕಾಶ್, ಸುಬ್ಬೆಗೌಡ, ನಾಗರಾಜ, ತಿಮ್ಮಯ್ಯ, ರಘು, ಶಿವಣ್ಣ ಇತರರಿದ್ದರು.