

ಬೆಂಗಳೂರು: ರಾಜ್ಯದಲ್ಲಿ ಕರೊನಾ ಏರುಗತಿಯಲ್ಲಿಯೇ ಸಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಹೊಸದಾಗಿ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಸತತವಾಗಿ 8 ಸಾವಿರಕ್ಕಿಂತಲೂ ಅಧಿಕವಾಗಿದೆ. ಶುಕ್ರವಾರ ಒಂದೇ ದಿನ 8,852 ಜನರು ಸೋಮಕಿಗೆ ಒಳಗಾಗಿದ್ದಾರೆ. ಆ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 3,35,928ಕ್ಕೆ ಏರಿದೆ.
ಅಂತೆಯೇ ಆಸ್ಪತ್ರೆಯಿಂದ ಬಿಡುಗಡೆಯಾದವರು 7,101 ಆಗಿದೆ. ಚೇತರಿಕೆ ಕಂಡ ಒಟ್ಟು ಜನರ ಸಂಖ್ಯೆ 2,42,229 ಆಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಿಸಿರುವ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಸಾವಿನ ಸಂಖ್ಯೆ ಕೂಡ ನೂರು ದಾಟಿದ್ದು, 106 ಜನರು ಮೃತಪಡುವುದರೊಂದಿಗೆ ಈವರೆಗೆ 5,589 ಜನರು ಕೋವಿಡ್ಗೆ ಬಲಿಯಾಗಿದ್ದಾರೆ. ಸದ್ಯ 760 ಜನರ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು, ರಾಜಧಾನಿಯಲ್ಲಿ 2,821 ಜನರು ಹೊಸದಾಗಿ ಸೋಂಕಿಗೆ ಒಳಗಾಗಿದ್ದಾರೆ. ಬೆಂಗಳೂರಿನಲ್ಲಿರುವ ಒಟ್ಟು ಕೋವಿಡ್ ರೋಗಿಗಳ ಸಂಖ್ಯೆ 1,27,263ಕ್ಕೆ ತಲುಪಿದೆ. ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದವರ ಸಂಖ್ಯೆ 2,406 ಆಗಿದ್ದರೆ, ಒಟ್ಟು ಗುಣವಾದವರು 87,621. ಇನ್ನು 27 ಜನರು ಸಾವಿಗೀಡಾಗುವ ಮೂಲಕ 1,938 ಜನರು ಕರೊನಾದಿಂದ ಮೃತಪಟ್ಟಂತಾಗಿದೆ.
ರಾಜಧಾನಿ ಮಾತ್ರವಲ್ಲದೇ, ಜಿಲ್ಲೆಗಳಲ್ಲೂ ಕೂಡ ಕರೊನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಈ ಕಾರಣದಿಂದಾಗಿಯೇ, ಕೋವಿಡ್ ರೋಗಿಗಳ ಸಂಖ್ಯೆ ಕೇಳಗಿಳಿಯುತ್ತಲೇ ಇಲ್ಲ ಎಂದು ವಿಶ್ಲೇಷಿಸಲಾಗಿದೆ.
ಜಿಲ್ಲಾವಾರು ಕೋವಿಡ್ ಅಂಕಿ-ಅಂಶ