

ಹಾವೇರಿ: 2022ರ ಜನವರಿ 6ರಿಂದ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶನಿವಾರ ಬಿಡುಗಡೆ ಮಾಡಲಾಯಿತು.
ಹಾವೇರಿ ಜಿಪಂ ಸಭಾಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನದ ಲಾಂಛನವನ್ನು ಸಚಿವ ಸುನಿಲ್ ಕುಮಾರ್ ಬಿಡುಗಡೆ ಮಾಡಿದರು. ಲಾಂಛನದಲ್ಲಿ ಹಾವೇರಿ ಜಿಲ್ಲೆಯ ಮಹತ್ವದ ಸ್ಥಳಗಳು, ಪರಂಪರೆ, ಸಂಸ್ಕೃತಿ, ಯೋಧರು, ಹುತಾತ್ಮರು, ಮಹಾನ್ ಸಂತರು, ಕವಿಗಳನ್ನು ಬಿಂಬಿಸಲಾಗಿದೆ. ಜಾನಪದ ವಿವಿಯ ಸಹಾಯಕ ಕುಲಸಚಿವ ಎಸ್.ಎಚ್. ಮುದಕವಿ ಅವರು ಈ ಲಾಂಛನವನ್ನು ವಿನ್ಯಾಸ ಮಾಡಿದ್ದಾರೆ.
ಕಸಾಪ ಅಧ್ಯಕ್ಷ ಡಾ.ಮಹೇಶ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಶಾಸಕರಾದ ನೆಹರು ಓಲೇಕಾರ, ಅರುಣ್ಕುಮಾರ್ ಪೂಜಾರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಮಹ್ಮದ್ ರೋಷನ್, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಇದ್ದರು.