ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಪೋಟ: 82 ಜನ ಸಾವು

ibn khatib
Published on

ಬಾಗ್ದಾದ್: ಕೋವಿಡ್ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಕನಿಷ್ಠ 82 ಜನ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಇರಾಕ್ ದೇಶದ ರಾಜಧಾನಿ ಬಾಗ್ದಾದ್​ನಲ್ಲಿ ನಡೆದಿದೆ.

ಘಟನೆಯಲ್ಲಿ ಸುಮಾರು 110 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ರೀತಿ ಘಟನೆಗಳು ಮರುಕಳಿಸದಂತೆ ತುರ್ತಾಗಿ ಎಲ್ಲ ಆಸ್ಪತ್ರೆಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಇರಾಕ್ ಆಂತರಿಕ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಐಬಿಎನ್ ಕತಿಬ್ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ಪೂರೈಸಲು ತಂದಿದ್ದ ಆಕ್ಸಿಜ್​ ಟ್ಯಾಂಕ್​ನಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಇಡೀ ಆಸ್ಪತ್ರೆಯನ್ನು ವ್ಯಾಪಿಸಿದ್ದರಿಂದ 70 ಕೋವಿಡ್ ರೋಗಿಗಳು ಹಾಗೂ 12 ಜನ ಅವರ ಸಂಬಂಧಿಕರು, ವೈದ್ಯರು, ನರ್ಸ್​​ಗಳು ಮೃತಪಟ್ಟಿದ್ದಾರೆ. ಸಾವು ನೋವಿನ ಪ್ರಮಾಣ ಇನ್ನೂ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ದುರಂತ ನಡೆಯಲು ಮೇಲ್ನೋಟಕ್ಕೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ತಿಳಿದು ಬಂದಿದ್ದು, ಇರಾಕ್ ಸರ್ಕಾರ ಈ ಕುರಿತು ಉನ್ನತ ತನಿಖೆಗೆ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net