

ಪಟನಾ: ಸ್ನೇಹಿತನ ಜತೆ ಹೊರಗಡೆ ಸುತ್ತಾಡಿ ಬಂದನೆಂಬ ಕಾರಣಕ್ಕೆ ತಂದೆಯೇ ಮಗನಿಗೆ ಹೊಡೆದು ಕೊಲೆ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮೃತ ಬಾಲಕನನ್ನು ನಮನ್ (9) ಎಂದು ಗುರುತಿಸಲಾಗಿದೆ. ನಮನ್ನ ಗುರುವಾರ ಸಂಜೆ ಸ್ನೇಹಿತರೊಂದಿಗೆ ಮಲಹಿಪಕ್ಡಿ ಸ್ಲಂ ಏರಿಯಾದಲ್ಲಿ ಸುತ್ತಾಡಲು ಹೋಗಿದ್ದ. ಅದರಿಂದ ಸಿಟ್ಟಿಗೆದ್ದ ತಂದೆ ವಿಜಯ್ ಲಾಲ್ ರಾತ್ರಿ ಪೂರ್ತಿ ಮಗನಿಗೆ ಥಳಿಸಿದ್ದಾನೆ. ಆತ ಎಚ್ಚರ ತಪ್ಪಿ ಬೀಳುವವರೆಗೂ ಹೊಡೆದಿದ್ದಾನೆ. ಅದಾದ ನಂತರ ಹೋಗಿ ಮಲಗಿದ್ದಾನೆ.
ಬೆಳಗ್ಗೆ ನಮನ್ನ ಅಕ್ಕ ಮಾನ್ಯ ಎದ್ದು ತಮ್ಮನನ್ನು ಎಬ್ಬಿಸಲು ನೋಡಿದ್ದಾಳೆ. ಆಗ ಆತ ಏಳದಿದ್ದಾಗ ಪರಿಶೀಲಿಸಿದರೆ ಆತನ ಉಸಿರು ನಿಂತಿರುವುದು ಗೊತ್ತಾಗಿದೆ. ಈ ವಿಚಾರವಾಗಿ ಕಂಕರ್‌ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನ ದೇಹದ ಮೇಲೆ ಸಾಕಷ್ಟು ಗಾಯವಾಗಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)