ಕರೊನಾ ಸೋಂಕಿತರ ನೆರವಿಗೆ ನಿಂತ ನಟ ಅಕ್ಷಯ್​ ಕುಮಾರ್; 1 ಕೋಟಿ ರೂಪಾಯಿ ದೇಣಿಗೆ

akshaY
Published on

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಈ ಕಷ್ಟದ ಸಮಯದಲ್ಲಿ ಸೋಂಕಿತರ ಸಹಾಯಕ್ಕೆ ಅನೇಕರು ಮುಂದಾಗಿದ್ದಾರೆ. ಅದರಂತೆ ಬಾಲಿವುಡ್ ನಟ ಅಕ್ಷಯ್ ಕುಮಾರ್​ ಕೂಡ ಸೋಂಕಿತರ ನೆರವಿಗೆ ಮುಂದೆ ಬಂದಿದ್ದಾರೆ.

ಬಿಜೆಪಿ ಸಂಸದ ಗೌತಮ್​ ಗಂಭೀರ್ ಅವರು ನಡೆಸುತ್ತಿರುವ ಗಂಭೀರ್​ ಫೌಂಡೇಷನ್​ಗೆ ನಟ ಅಕ್ಷಯ್​ ಕುಮಾರ್ 1 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಆ ಹಣವನ್ನು ಸೋಂಕಿತರ ಆಹಾರ, ಆಕ್ಸಿಜನ್​ ಸೇರಿ ವಿವಿಧ ಬೇಡಿಕೆಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.

ಅಕ್ಷಯ್ ಅವರು ಈ ರೀತಿ ಸಹಾಯ ಹಸ್ತ ಚಾಚಿರುವ ಬಗ್ಗೆ ಗೌತಮ್​ ಗಂಭೀರ್​ ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ನೆರವು ನೀಡಲು ಮುಂದೆ ಬಂದಿದ್ದಕ್ಕಾಗಿ ಧನ್ಯವಾದಗಳು. ಕತ್ತಲೆಯಲ್ಲಿ ಮುಳುಗಿರುವಾಗ ಪ್ರತಿ ಸಹಾಯವೂ ಭರವಸೆಯ ಕಿರಣವಾಗುತ್ತದೆ. ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಟ್ವೀಟ್​ ಮಾಡಿದ್ದಾರೆ. ಅಂದ ಹಾಗೆ ಅಕ್ಷಯ್​ ಕುಮಾರ್ ಅವರು ಕಳೆದ ವರ್ಷ ಕೂಡ ಪಿಎಂ ಕೇರ್ಸ್ ಗೆ 25 ಕೋಟಿ ರೂಪಾಯಿ ದೇಣಿಗೆ ನೀಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net