More

    ನಿಮಗೊಂದು ಚಾಲೆಂಜ್! ಈ ಫೋಟೋವನ್ನ ಸರಿಯಾಗಿ ನೋಡಿ ಯಾರಾದರು ಸ್ಟಾರ್​ ಹೀರೋ ಕಾಣ್ತಾ ಇದ್ದಾರಾ ?

    ಮುಂಬೈ: ಸೋಶಿಯಲ್​ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಈ ಫೋಟೋದಲ್ಲಿ ಇಬ್ಬರು ಸ್ಟಾರ್​ ನಟರು ಇದ್ದಾರೆ. ಬಾಲಿವುಡ್​ನ ಟಾಪ್​ ಹೀರೋಗಳ ಪಟ್ಟಿಯಲ್ಲಿ ಅವರ ಹೆಸರು ಕೂಡ ಇದೆ. ಮೈಗೆ ಕೆಸರು ಮೆತ್ತಿಕೊಂಡು ನಿಂತಿರುವ ಬಾಲಿವುಡ್​ನ ಇಬ್ಬರು ಖ್ಯಾತ ನಟರು ಯಾರೆಂಬುದು ಪತ್ತೆ ಹಚ್ಚಬೇಕು.

    ಇದನ್ನೂ ಓದಿ:‘ಡೀಪ್‌ಫೇಕ್ ಬಗ್ಗೆ ಅವರಿಗಾಗಿ ನಾನು ಮಾತನಾಡಿದೆ’: ಹೀಗೆಂದಿದ್ದೇಕೆ ರಶ್ಮಿಕಾ ಮಂದಣ್ಣ?

    ಇದು ಬೇರೆ ಯಾರೂ ಅಲ್ಲ. ಹಿಂದಿ ಚಿತ್ರರಂಗದ ಜನಪ್ರಿಯ ನಟರಾದ ಅಕ್ಷಯ್​ ಕುಮಾರ್​ ಮತ್ತು ಟೈಗರ್​ ಶ್ರಾಫ್​! ನಟರ ಹೆಸರು ಹೇಳಿದ ನಂತರವೂ ಈ ಫೋಟೋದಲ್ಲಿ ಅವರು ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಕೂಡ ಒಂದು ಕಷ್ಟದ ಟಾಸ್ಕ್​. ಯಾಕೆಂದರೆ, ಮೈಗೆಲ್ಲ ಕೆಸರು ಮೆತ್ತಿಕೊಂಡಿರುವ ಅವರನ್ನು ಗುರುತು ಹಿಡಿಯಲು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಬೇಕು.

    ನಿಮಗೊಂದು ಚಾಲೆಂಜ್! ಈ ಫೋಟೋವನ್ನ ಸರಿಯಾಗಿ ನೋಡಿ ಯಾರಾದರು ಸ್ಟಾರ್​ ಹೀರೋ ಕಾಣ್ತಾ ಇದ್ದಾರಾ ?

    ಫೋಟೋದಲ್ಲಿ ಎಡಗಡೆಯಿಂದ ಇರುವ ಮೂರನೆಯವರೇ ಅಕ್ಷಯ್​ ಕುಮಾರ್​. ಅವರ ಎಡಭಾಗದಲ್ಲಿ ನಿಂತಿರುವುದು ಟೈಗರ್​ ಶ್ರಾಫ್​. ಸೋಶಿಯಲ್​ ಮೀಡಿಯಾದಲ್ಲಿ ಅಕ್ಷಯ್​ ಕುಮಾರ್​ ಅವರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದ ಶೂಟಿಂಗ್​ ಸೆಟ್​ನಲ್ಲಿ ಕ್ಲಿಕ್ಕಿಸಿದ ಫೋಟೋ. ಒಂದು ಹಂತದ ಶೂಟಿಂಗ್​ ಮುಗಿದಿದೆ ಎಂಬುದನ್ನು ಈ ಫೋಟೋ ಹಂಚಿಕೊಳ್ಳುವ ಮೂಲಕ ಅಕ್ಷಯ್​ ಕುಮಾರ್​ ತಿಳಿಸಿದ್ದಾರೆ. ಅಕ್ಷಯ್​ ಕುಮಾರ್ ತಮ್ಮ ಸಾಮಾಜಿಕ ತಾಲತಾಣದಲ್ಲಿ ಹಾಕಿಕೊಂಡಿದ್ದಾರೆ.

    ಈ ವರ್ಷ ಈದ್​ ಹಬ್ಬದ ಪ್ರಯುಕ್ತ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಬಿಡುಗಡೆ ಆಗಲಿದೆ. ಮುಂಬೈ, ಲಂಡನ್​, ಸ್ಕಾಟ್ಲೆಂಡ್​, ಅಬು ಧಾಬಿ, ಜೋರ್ಡನ್​ ಮುಂತಾದ ಕಡೆಗಳಲ್ಲಿ ಈ ಸಿನಿಮಾದ ಶೂಟಿಂಗ್​ ಮಾಡಲಾಗಿದೆ.

    ಅಲಿ ಅಬ್ಬಾಸ್​ ಜಾಫರ್​ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಸೋನಾಕ್ಷಿ ಸಿನ್ಹಾ, ಪೃಥ್ವಿರಾಜ್​ ಸುಕುಮಾರನ್​ ಅವರು ಕೂಡ ‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಬಹುಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts