ಪಾರ್ಟ್‌ಟೈಮ್ ನೌಕರಿ; ಟೆಕ್ಕಿಗೆ 81.71 ವಂಚಿಸಿದ ಕಳ್ಳಿ

cyber crime
Published on

ಬೆಂಗಳೂರು: ಅರೆಕಾಲಿಕ ನೌಕರಿಯಿಂದ ಕೈತುಂಬ ಸಂಪಾದನೆ ಆಮಿಷವೊಡ್ಡಿ ಸ್‌ಟಾವೇರ್ ಇಂಜಿನಿಯರ್‌ಗೆ ಸೈಬರ್ ಕಳ್ಳಿ ಬರೋಬ್ಬರಿ 81.71 ಲಕ್ಷ ರೂ. ವಂಚನೆ ಮಾಡಿದ್ದಾಳೆ.

ದೊಡ್ಡನೆಕ್ಕುಂದಿ ನಿವಾಸಿ 43 ವರ್ಷದ ಸ್‌ಟಾವೇರ್ ಇಂಜಿನಿಯರ್ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಲಲಿತಾ ಎಂಬಾಕೆ ವಿರುದ್ಧ ವೈಟ್‌ಫೀಲ್ಡ್ ಸಿಇಎನ್ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಆಗಸ್ಟ್ 26ರಂದು ಸ್‌ಟಾವೇರ್ ಇಂಜಿನಿಯರ್‌ಗೆ ಟೆಲಿಗ್ರಾಮ್‌ನಲ್ಲಿ ಲಲಿತಾ ಎಂಬಾಕೆ ಡಿಜಿಟಲ್ ಮಾರ್ಕೆಟಿಂಗ್ ಏಜೆನ್ಸಿಯಿಂದ ಮಾತನಾಡುತ್ತೇನೆ ಎಂದು ಪರಿಚಯ ಮಾಡಿಕೊಂಡಿದ್ದಾಳೆ. ಅರೆಕಾಲಿಕ ನೌಕರಿ ಇದ್ದು, ಟೆಲಿಗ್ರಾಮ್‌ನಲ್ಲಿ ಕೊಡುವ ಕೆಲ ಟಾಸ್ಕ್‌ಗಳನ್ನು ಬಗೆಹರಿಸುತ್ತಾ ಹೋದರೆ ನಿಮ್ಮಗೆ ಕೈತುಂಬ ಹಣ ಸಿಗಲಿದೆ ಎಂದು ಆಮಿಷವೊಡ್ಡಿದ್ದಾಳೆ. ಇದಕ್ಕೆ ಒಪ್ಪಿಕೊಂಡ ಟೆಕ್ಕಿ ಕಡೆಯಿಂದ ಅಕೌಂಟ್ ತೆರೆಯಬೇಕೆಂದು ಹೇಳಿ 100 ರೂ. ಅನ್ನು ಆನ್‌ಲೈನ್‌ನಲ್ಲಿ ಹಣ ಪಡೆದುಕೊಂಡಿದ್ದಳು. ಟೆಕ್ಕಿ ಹೆಸರಿನಲ್ಲಿ ಖಾತೆ ತೆರೆದು ಕೆಲ ಟಾಸ್ಕ್ ಕೊಟ್ಟು ಆ ಖಾತೆಗೆ ಹಣ ಜಮೆ ಮಾಡಿದ್ದಳು.

ಅಲ್ಲಿದ್ದ ಹಣ ಡ್ರಾ ಮಾಡಲು ಟೆಕ್ಕಿ ಪ್ರಯತ್ನ ಮಾಡಿದಾಗ ಸಾಧ್ಯವಾಗಿರಲಿಲ್ಲ. ಪ್ರಶ್ನಿಸಿದಕ್ಕೆ ಹಣ ಹೂಡಿಕೆ ಮಾಡಿದರೆ ಆ ಹಣ ಡ್ರಾ ಮಾಡಲು ಸಾಧ್ಯವಾಗಲಿದೆ ಮತ್ತು ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ ಎಂದು ಆಮಿಷವೊಡ್ಡಿದ್ದಳು. ಇದನ್ನು ನಂಬಿದ ಟೆಕ್ಕಿ, ವಂಚಕಿ ಕೊಟ್ಟ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ 81.71 ಲಕ್ಷ ರೂ. ಜಮೆ ಮಾಡಿದ್ದಾರೆ. ಆದರೆ, ಯಾವುದೇ ಕಮಿಷನ್ ಅಥವಾ ವೇತನ ಕೈ ಸೇರಲಿಲ್ಲ.

ಕೊನೆಗೆ ಟೆಕ್ಕಿ, ಹೂಡಿಕೆ ಹಣ ವಾಪಸ್ ಕೊಡುವಂತೆ ಕೇಳಿದಾಗ ಟೆಲಿಗ್ರಾಮ್ ಗ್ರೂಪ್‌ನ್ನು ನಾಶ ಮಾಡಿ ಸಂಪರ್ಕವನ್ನು ವಂಚನೆ ಕಡಿತ ಮಾಡಿದ್ದಳು. ಆಗ ಟೆಕ್ಕಿಗೆ ವಂಚನೆಗೆ ಒಳಗಾಗಿರುವುದು ಖಚಿತವಾಗಿ ಸಿಇಎನ್ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net