ರಾಖಿ ಕಟ್ಟಲು ಬಿಸಿಲನ್ನು ಲೆಕ್ಕಿಸದೇ ಬರಿಗಾಲಲ್ಲೇ 8 ಕಿ.ಮೀ ನಡೆದು ಬಂದ ವೃದ್ಧೆ..!

rakhi tied
Published on

ಕರೀಂನಗರ: ರಾಖಿ ಹಬ್ಬ ಎಂದಾಕ್ಷಣ ಅಣ್ಣ ತಂಗಿ, ಅಣ್ಣನ ನಡುವಿನ ಬಾಂಧವ್ಯ ನೆನಪಾಗುತ್ತದೆ. ರಕ್ಷಾ ಬಂಧನವು ಅವರ ನಡುವಿನ ಬಾಂಧವ್ಯವನ್ನು ಸಂಕೇತಿಸುತ್ತದೆ. 80 ವರ್ಷದ ಮಹಿಳೆಯೊಬ್ಬರು ತನ್ನ ಕಿರಿಯ ಸಹೋದರನಿಗೆ ರಾಖಿ ಕಟ್ಟಲು ಒಬ್ಬಂಟಿಯಾಗಿ 8 ಕಿಲೋಮೀಟರ್ ನಡೆದು ಬಂದಿರುವ ಘಟನೆ ತೆಲಂಗಾಣದ ಕರೀಂನಗರ ಬಳಿ ನಡೆದಿದೆ.

ಇದನ್ನೂ ಓದಿ: ಹಾಸಿಗೆ ಕೆಳಗೆ ಪತ್ತೆಯಾಯ್ತು 12 ವರ್ಷದ ಬಾಲಕನ ಮೃತದೇಹ: ಸ್ನೇಹಿತನನ್ನು ನೋಡಿ ಉಳಿದವರಿಗೆ ಶಾಕ್​..!

ಕರೀಂನಗರ ಜಿಲ್ಲೆಯ ಕೊತ್ತಪಲ್ಲಿಯ 80 ವರ್ಷದ ಮಹಿಳೆಯೊಬ್ಬರು ತನ್ನ ಕಿರಿಯ ಸಹೋದರನಿಗೆ ರಾಖಿ ಕಟ್ಟಲು ಬರಿಗಾಲಿನಲ್ಲಿ ಬಿಸಿಲನ್ನೂ ಲೆಕ್ಕಿಸದೇ 8 ಕಿ.ಮೀ. ನಡೆದಿದ್ದಾಳೆ. ಈ ವೇಳೆ ಆಕೆಯನ್ನು ಕಂಡ ಯುವಕನೊಬ್ಬ, ನಡೆದುಕೊಂಡು  ಎಲ್ಲಿಗೆ ಹೋಗುತ್ತೀಯಾ?’ ಎಂದು ಕೇಳಿದಾಗ ಆಕೆ ತಾನು ಕೊತ್ತಪಲ್ಲಿಯವಳು, ತಾನು ಕೊಂಡಯ್ಯಪಲ್ಲಿಯಲ್ಲಿರುವ ತನ್ನ ಕಿರಿಯ ಸಹೋದರನಿಗೆ ರಾಖಿ ಕಟ್ಟಲು ಹೊರಟಿದ್ದಾಗಿ ತಿಳಿಸಿದ್ದಾಳೆ.

ಈ ವಿಡಿಯೋವನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಎಲ್ಲೆಡೆ ಹರಿದಾಡುತ್ತಿದೆ. ಮನುಷ್ಯ ಸಂಬಂಧಕ್ಕಿಂತ ಹಣವೇ ಮುಖ್ಯವಾಗಿರುವ ಈ ಕಾಲದಲ್ಲಿ ಇಂತಹ ಪ್ರೀತಿ ನಿಜಕ್ಕೂ ಪವಾಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಹದಲ್ಲಿ ಶಕ್ತಿ ಕಡಿಮೆಯಾಗಿದ್ದರೂ ತನ್ನ ಅಣ್ಣನ ಮೇಲಿನ ಪ್ರೀತಿಗೆ ಸಾವಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾಳೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net