Food Poisoning | ಜಾತ್ರೆಯಲ್ಲಿ ಊಟ ಮಾಡಿ 80 ಮಂದಿ ಅಸ್ವಸ್ಥ!

80 People In Hospital After Food Poisoning At Jharkhand Fair 1 Critical
Published on

ಜಾರ್ಖಂಡ್‌: ಧನ್‌ಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಜಾತ್ರೆಯಲ್ಲಿ ನಕಲಿ 'ಚಾಟ್ ಮಸಾಲಾ' ಸೇವಿಸಿ 80 ಜನರು ಅಸ್ವಸ್ಥರಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ನಡೆದಿದ್ದೇನು?: ಹುಚ್ಚುಕ್ತಂದಡ್ ಗ್ರಾಮದ ಜನರು ಭೋಕ್ತಾ ಜಾತ್ರೆ ಮುಗಿಸಿ ವಾಪಸಾದ ನಂತರ ಹೊಟ್ಟೆ ನೋವು ಮತ್ತು ವಾಂತಿ ಮಾಡಿಕೊಳ್ಳುಲು ಶುರುವಾಗಿದೆ. ಅವರಲ್ಲಿ ಎಂಭತ್ತು ಮಂದಿಯ ಸ್ಥಿತಿ ಹದಗೆಟ್ಟಿದ್ದರಿಂದ ರಾತ್ರಿ 10:30 ರ ಸುಮಾರಿಗೆ ಶಾಹಿದ್ ನಿರ್ಮಲ್ ಮಹ್ತೋ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂಬತ್ತು ವರ್ಷದ ಪಿಂಕಿ ಕುಮಾರಿ, ಹಿರಿಯ ವ್ಯಕ್ತಿ 44 ವರ್ಷ ವಯಸ್ಸಿನ ವಿಜಯ್ ಮಹತೋ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಅಸ್ವಸ್ಥರಲ್ಲಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬುಧವಾರ ಸಂಜೆ ಕರ್ಮತಾಂಡ್ ಪಂಚಾಯತ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಎಮರ್ಜೆನ್ಸಿ ವಾರ್ಡ್‌ನಲ್ಲಿನ ಬೆಡ್‌ಗಳ ಕೊರತೆಯಿಂದಾಗಿ ಇಷ್ಟು ದೊಡ್ಡ ಸಂಖ್ಯೆಯ ರೋಗಿಗಳು ಒಟ್ಟಿಗೆ ಆಗಮಿಸಿದ್ದರಿಂದ ಕೆಲವರಿಗೆ ಆಸ್ಪತ್ರೆಯ ಇತರ ವಾರ್ಡ್‌ಗಳಲ್ಲಿ ಚಿಕಿತ್ಸೆ ಕಲ್ಪಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net