

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮದುವೆಯ ವಿಡಿಯೋ ಮತ್ತು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಆದರೆ ಇಲ್ಲೊಂದು ಜೋಡಿ ಮದುವೆ ಮಂಟಪದಲ್ಲಿ ಪರಸ್ಪರ ಸಿಹಿ ತಿನ್ನಿಸುವ ಸಮಯದಲ್ಲಿ ಕಿತ್ತಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಮದುವೆ ಮನೆಯ ವಾತಾವರಣ ತುಂಬಾ ಸುಂದರವಾಗಿರುತ್ತೆ. ಇಲ್ಲೊಂದು ಮದುವೆ ಮಂಟಪದಲ್ಲಿ ಖುಷಿಯಿರುವ ಬದಲು ಸಂಪೂರ್ಣ ಗಲಾಟೆ, ಗದ್ದಲವೇ ತುಂಬಿಕೊಂಡಿತ್ತು. ಮಂಟಪದಲ್ಲೇ ವಧು-ವರರು ಜುಟ್ಟು ಹಿಟ್ಕೊಂಡು ಕಿತ್ತಾಡಿಕೊಂಡ್ರು. ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ವೀಡಿಯೋ ಸಖತ್ ವೈರಲ್ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?: ಮೊದಲಿಗೆ, ವರನು ವಧುವಿಗೆ ಸಿಹಿತಿಂಡಿ ತಿನ್ನಲು ಬಲವಂತವಾಗಿ ಪ್ರಯತ್ನಿಸುತ್ತಾನೆ. ವಧು ಕೋಪದಿಂದ ವರನ ಕೈಗೆ ಹೊಡೆಯುತ್ತಾಳೆ . ವರನು ನಂತರ ಇನ್ನಷ್ಟು ಕೋಪಗೊಳ್ಳುತ್ತಾನೆ ಮತ್ತು ಅವಳ ಮುಖಕ್ಕೆ ಹೊಡೆಯಲು ಪ್ರಾರಂಭಿಸುತ್ತಾನೆ. ನಂತರ ದಂಪತಿ ಒಬ್ಬರನ್ನೊಬ್ಬರು ತಳ್ಳುತ್ತಾರೆ ಮತ್ತು ಒಬ್ಬರ ಮೇಲೊಬ್ಬರು ಗುದ್ದುತ್ತಾರೆ. ಸಂಬಂಧಿಕರು ಮಧ್ಯಪ್ರವೇಶಿಸಿ ಅವರನ್ನು ತಡೆದು ಅವರ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದರು. ಆದಾಗ್ಯೂ, ವಧು ಮತ್ತು ವರರು ಪರಸ್ಪರ ಕೂದಲನ್ನು ಎಳೆದಾಡಿಕೊಂಡು ಜಗಳ ಮುಂದುವರೆಸುತ್ತಾರೆ.
ಮದುವೆ ಎಂದರೆ ಶುಭಕಾರ್ಯ. ಆದರೆ ಈ ಮದುವೆ ಮನೆ ವಧು-ವರರ ಕಿತ್ತಾಟಕ್ಕೆ ರಣಾಂಗಣವೇ ಆಗಿ ಹೋಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.