

ಢಾಕಾ: ಪ್ರಯಾಣಿಕರನ್ನೂ ಹೊತ್ತು ಸಾಗುತ್ತಿದ್ದ ಬೋಟ್ ಒಂದೂ ಮರಳು ತುಂಬಿದ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರೂ ಮಕ್ಕಳೂ ಸೇರಿದಂತೆ ಎಂಟು ಮಂದಿ ಮೃತಪಟ್ಟಿರುವ ಘಟನೆ ಬಾಂಗ್ಲಾದೇಶದ ಪದ್ಮಾ ನದಿಯಲ್ಲಿ ನಡೆದಿದೆ.
ಢಾಕಾದ ಮುನ್ಷಿಗಂಜ್ ಜಿಲ್ಲೆಯಲ್ಲಿ ಆಗಸ್ಟ್ 05ರ ಶನಿವಾರ ರಾತ್ರಿ 8:30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ ಎಂದು ಲೌಹಾಜಂಗ್ ವಿಭಾಗದ ಅಗ್ನಿಶಾಮಕ ಇಲಾಖೆ ಅಧಿಕಾರಿ ಖೈಸ್ ಅಹ್ಮದ್ ತಿಳಿಸಿದ್ದಾರೆ.
ಘಟನೆಯ ಕುರಿತು ಮಾಹಿತಿ ನೀಡಿದ ಖೈಸ್ ಅಹ್ಮದ್ ಬೋಟಿನಲ್ಲಿ ಒಟ್ಟು 46 ಪ್ರಯಾಣಿಕರಿದ್ದರೂ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೂ ಮೂವರೂ ಮಕ್ಕಳೂ ಸೇರಿದಂತೆ ಎಂಟು ಮಂದಿಯ ಮೃತದೇಹಗಳನ್ನೂ ಹೊರ ತೆಗೆದಿದ್ದೇವೆ. ಪ್ರತಿಕೂಲ ವಾತಾವರಣದಿಂದಾಗಿ ನದಿಯಲ್ಲಿ ನಿಂತಿದ್ದ ಬೋಟ್ ನಾಪತ್ತೆಯಾದ ಪರಿಣಾಮ ರಕ್ಷಣಾ ಕಾರ್ಯಾಚರಣೆಯನ್ನೂ ಮತ್ತಷ್ಟು ಚುರುಕುಗೊಳಿಸಲಾಗಿದೆ.
ಸಿರಾಜ್ ದಿಖಾನ್ ಪ್ರದೇಶದಿಂದ ಪ್ರವಾಸಕ್ಕೆ ಆಗಮಿಸಿದ್ದ ಜನರು ದಿನವಿಡಿ ಬೋಟ್ನಲ್ಲಿ ಪಿಕ್ನಿಕ್ಗೆ ತೆರಳಿದ್ದರೂ. ಬೋಟ್ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ನೀರಿನಲ್ಲಿ ಮುಳುಗಿದೆ. ಅದರಲ್ಲಿದ್ದ ಬಹುತೇಕರು ಈಜಿ ದಡ ಸೇರಿದ್ದಾರೆ. ಉಳಿದಿರುವವರಿಗೆ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಲೌಹಾಜಂಗ್ ವಿಭಾಗದ ಅಗ್ನಿಶಾಮಕ ಇಲಾಖೆ ಅಧಿಕಾರಿ ಖೈಸ್ ಅಹ್ಮದ್ ಮಾಹಿತಿ ನೀಡಿದ್ದಾರೆ.