VIDEO| ಕಳ್ಳತನದ ಶಂಕೆಯಲ್ಲಿ ಅಪ್ರಾಪ್ತ ವಯಸ್ಕರಿಗೆ ಮೂತ್ರ ಕುಡಿಸಿ ಖಾಸಗಿ ಅಂಗಕ್ಕೆ ಹಸಿಮೆಣಸಿನಕಾಯಿ ಉಜ್ಜಿ ವಿಕೃತಿ

assault
ಸಾಂದರ್ಭಿಕ ಚಿತ್ರ
Published on

ಲಖನೌ: ಅಂಗಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿದ್ದಾರೆ ಎಂದು ಶಂಕಿಸಿ ದುಷ್ಕರ್ಮಿಗಳ ಗುಂಪೊಂದು ಅಪ್ರಾಪ್ತ ವಯಸ್ಕ ಬಾಲಕರಿಬ್ಬರಿಗೆ ಬಲವಂತವಾಗಿ ಮೂತ್ರ ಕುಡಿಸಿ ಖಾಸಗಿ ಅಂಗಗಳಿಗೆ ಹಸಿಮೆಣಸಿನಕಾಯಿಯಿಂದ ಉಜ್ಜಿ, ಇಂಜೆಕ್ಷನ್​ ನೀಡಿ ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಬಾಲಕರಿಬ್ಬರಿಗೆ ಬಲವಂತೆವಾಗಿ ಮೆಣಸಿನಕಾಯಿಯನ್ನು ತಿನ್ನಿಸಿ ಆ ನಂತರ ಮೂತ್ರ ಕುಡಿಸುತ್ತಿರುವುದು ಕಂಡು ಬರುತ್ತದೆ. ಸಂತ್ರಸ್ತ ಬಾಲಕರಿಬ್ಬರು 10-15 ವರ್ಷದವರು ಎಂದು ಹೇಳಲಾಗಿದೆ.

Harassment

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಬಾಲಕರಿಬ್ಬರನ್ನೂ ಕಟ್ಟಿಹಾಕಿರುವ ದುಷ್ಕರ್ಮಿಗಳು ಮೊದಲಿಗೆ ಅವರ ಗುದನಾಳಕ್ಕೆ ಹಸಿಮೆಣಸಿನಕಾಯಿಯಿಂದ ಉಜ್ಜುತ್ತಾನೆ. ಉರಿ ತಾಳಲಾರದೆ ಬಾಲಕರಿಬ್ಬರು ಕೂಗಿಕೊಳ್ಳುತ್ತಿದ್ದರು ಸುಮ್ಮನಾಗದ ಆರೋಪಿಗಳು ಅವರಿಗೆ ಇಂಜೆಕ್ಷನ್​ ನೀಡಿದ ಬಳಿಕ ಅವರಿಬ್ಬರಿಗೆ ಮೂತ್ರ ಕುಡಿಸುತ್ತಿರುವುದು ಕಂಡು ವೈರಲ್​ ಆಗಿರುವ ವಿಡಿಯೋದಲ್ಲಿ ಕಂಡು ಬರುತ್ತದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿದ್ಧಾರ್ಥ್​ ಪ್ರಕರಣ ಸಂಬಂಧ ಆರು ಮಂದಿಯನ್ನೂ ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಶೀಘ್ರವೇ ಚಾರ್ಜ್​ಶೀಟ್​ ಸಿದ್ದಪಡಿಸಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸಿದ್ಧಾರ್ಥ್ ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net