ಆಶ್ರಮದಲ್ಲಿ 70 ವರ್ಷದ ಸ್ವಾಮೀಜಿಯ ಕೈಕಾಲು ಕಟ್ಟಿ ಇರಿದು ಕೊಂದ ದುಷ್ಕರ್ಮಿಗಳು!

Crime Scene
Published on

ಜೈಪುರ: ಆಶ್ರಮವೊಂದರಲ್ಲಿ ಸನ್ಯಾಸಿಯ ಕೈಕಾಲು ಕಟ್ಟಿ ಇರಿದುಕೊಂದ ಘಟನೆ ನಡೆದಿದೆ. ರಾಜಸ್ಥಾನದ ದಿದ್ವಾನಾ-ಕಚಮನ್ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. 70 ವರ್ಷದ ಸಂತ ಮೋಹನದಾಸ್ ಕೊಲೆಗೀಡಾದ ಸ್ವಾಮೀಜಿ.

ರಸಲ್ ಗ್ರಾಮದ ಅವರ ಆಶ್ರಮದಲ್ಲಿ ಭಾನುವಾರ ರಾತ್ರಿ ಈ ಪ್ರಕರಣ ನಡೆದಿದ್ದು, ಸೋಮವಾರ ಬೆಳಗ್ಗೆ ವಿಷಯ ಬಹಿರಂಗಗೊಂಡಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸ್ವಾಮೀಜಿಯ ರಕ್ತಸಿಕ್ತ ದೇಹವನ್ನು ನೋಡಿ ಭಕ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ದುಷ್ಕರ್ಮಿಗಳು ಸ್ವಾಮೀಜಿಯ ಕೈಕಾಲು ಕಟ್ಟಿ ಬಳಿಕ ಇರಿದು ಕೊಲೆ ಮಾಡಿದ್ದರು. ಈ ಕುರಿತು ಸ್ವಾಮೀಜಿಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಮತ್ತೊಂದೆಡೆ ಸ್ವಾಮೀಜಿ ದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ.

ರಸಲ್ ಗ್ರಾಮದ ಹೊರವಲಯದ ಹರಿರಾಂ ಬಾಬಾ ಗಾರ್ಡನ್​ನ ಭೈರುಬಾಬಾ ದೇವಸ್ಥಾನದಲ್ಲಿ ಕಳೆದ 14 ವರ್ಷಗಳಿಂದ ಸ್ವಾಮೀಜಿ ಮೋಹನದಾಸ್ ಸೇವೆ ಮಾಡಿಕೊಂಡಿದ್ದರು. ಸ್ವಾಮೀಜಿ ಆಶ್ರಮದಲ್ಲಿ ಏಕಾಂಗಿಯಾಗಿ ನೆಲೆಸಿದ್ದಾಗ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net