ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಐಸ್ ಕ್ರೀಮ್ ತಿಂದ 70 ಮಂದಿ ಅಸ್ವಸ್ಥ

odihsicecream
Published on

ಒಡಿಶಾ: ಬಿಸಿಲು ಉರಿಯುತ್ತಿದೆ ಎಂದು ತಣ್ಣಗಾಗಲು ಐಸ್ ಕ್ರೀಮ್ ತಿಂದು ಒಡಿಶಾದ ಕೊರಾಪುಟ್ ಜಿಲ್ಲೆಯ ಸಿಮಿಲಿಗುಡಾದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 70 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸಂಜೆ ಗಾಡಿ ಮೇಲೆ ಬಂದ ವ್ಯಕ್ತಿಯೊಬ್ಬ ಕೊರಾಪುಟ್ ಜಿಲ್ಲೆಯ ಸುತ್ತಮುತ್ತ ಗ್ರಾಮಗಳಲ್ಲಿ ಐಸ್ ಕ್ರೀಮ್ ಮಾರಾಟ ಮಾಡಿದ್ದಾನೆ. ಇವರಿಂದ ಐಸ್ ಕ್ರೀಮ್ ಖರೀದಿಸಿ ತಿಂದವರೆಲ್ಲ ತೀವ್ರ ಅಸ್ವಸ್ಥರಾದರು. ಮಕ್ಕಳು, ವಯಸ್ಕರು ಮತ್ತು ಮಹಿಳೆಯರು ಸೇರಿದಂತೆ 70 ಮಂದಿ ಅಸ್ವಸ್ಥರಾಗಿದ್ದಾರೆ. ರಾತ್ರಿ ಊಟ ಮುಗಿಸಿ ಐಸ್ ಕ್ರೀಮ್ ತಿಂದು ಮಲಗಿದವರೆಲ್ಲ ಹೊಟ್ಟೆ ನೋವು, ವಾಂತಿ, ಬೇಧಿಯಿಂದ ಬಳಲುತ್ತಿದ್ದರು.

ಐಸ್ ಕ್ರೀಂ ತಿಂದ 70 ಮಂದಿ ಅಸ್ವಸ್ಥ:

ಇದರಿಂದ ಸ್ಥಳೀಯರು ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆ ನೀಡಿದ ವೈದ್ಯರು ಪರೀಕ್ಷೆ ನಡೆಸಿ, ಸಂಗ್ರಹಿಸಿಟ್ಟಿದ್ದ ಐಸ್ ಕ್ರೀಮ್ ತಿಂದಿದ್ದು ವಿಷಾಹಾರವಾಗಿ ಹೊಟ್ಟೆ ನೋವು, ವಾಂತಿ ಶುರುವಾಗಿದ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆ ಕುರಿತು ಮಾಹಿತಿ ಪಡೆದ ಪೊಟ್ಟಂಗಿ ಶಾಸಕ ಪ್ರೀತಮ್ ಪಾಡಿ ಸಂತ್ರಸ್ತರು ಚಿಕಿತ್ಸೆ ಪಡೆಯುತ್ತಿರುವ ಆರೋಗ್ಯ ಕೇಂದ್ರಗಳಿಗೆ ತೆರಳಿದರು. ಈ ವೇಳೆ ಮಾತನಾಡಿ, ಚಿಕಿತ್ಸೆ ಬಳಿಕ 60 ಮಂದಿ ಗುಣಮುಖರಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ. ಉಳಿದ ಹತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸ್ ಕ್ರೀಮ್ ಮಾರಾಟ ಮಾಡಿದವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net