ಟ್ರೆಂಡ್​ ಆಗ್ತಿದೆ ಹಳೇ ಚಿತ್ರಗಳ ರಿ-ರಿಲೀಸ್​!; ಫಿಕ್ಸ್​ ಆಯ್ತು ಮತ್ತೊಂದು ಸೂಪರ್​ಹಿಟ್​ ಸಿನಿಮಾದ ಡೇಟ್​

Untitled design (7)
Published on

ಆಂಧ್ರಪ್ರದೇಶ: ಭಾರತೀಯ ಚಿತ್ರರಂಗದಲ್ಲಿ ಇದೀಗ ಸೂಪರ್​ಸ್ಟಾರ್​ಗಳು ಅಭಿನಯದ ಹಳೇ ಚಿತ್ರಗಳು ಸೇರಿದಂತೆ ಥಿಯೇಟರ್​​ಗಳಲ್ಲಿ ಬ್ಲಾಕ್​ಬಸ್ಟರ್​ ಹಿಟ್​ ಆದ ಸಿನಿಮಾಗಳನ್ನು ಮರು ಬಿಡುಗಡೆಗೊಳಿಸುವ ಟ್ರೆಂಡ್​ ಕಳೆದ ಕೆಲವು ದಿನಗಳಿಂದ ಪ್ರಾರಂಭಗೊಂಡಿದೆ.

ಇದಕ್ಕೆ ಉದಾಹರಣೆಯಂತೆ ಸೂರ್ಯ, ಪ್ರಿನ್ಸ್ ಮಹೇಶ್​ ಬಾಬು ಮತ್ತು ತಲೈವಾ ರಜನಿಕಾಂತ್​ ನಟನೆಯ ಸೂಪರ್​​ಹಿಟ್​ ಚಿತ್ರಗಳು ಪ್ರೇಕ್ಷಕರ ಮುಂದೆ ಮತ್ತೊಮ್ಮೆ ಹಾಜರಾಗಿ, ಮನರಂಜಿಸಿದೆ. ಇದೀಗ ಈ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ.

ಸೆಲ್ವರಾಘವನ್ ನಿರ್ದೇಶನದ ಲವ್ ಸ್ಟೋರಿ '7/ಜಿ ರೇನ್‌ಬೋ ಕಾಲೋನಿ' ಚಿತ್ರ ಇದೀಗ ಮರು ಬಿಡುಗಡೆಯಾಗಲು ಅಧಿಕೃತ ದಿನಾಂಕದೊಂದಿಗೆ ಪ್ರಕಟವಾಗಿದೆ. ಈ ಹಿಂದೆ ಇದರ ಬಗ್ಗೆ ಕೇಳಿಬಂದಿದ್ದ ವದಂತಿಗಳಿಗೆ ಚಿತ್ರತಂಡ ಈಗ ರಿಲೀಸ್​ ಡೇಟ್​ ತಿಳಿಸುವ ಮುಖೇನ ತೆರೆ ಎಳೆದಿದೆ. ಡಾಲ್ಬಿ ಅಟ್ಮಾಸ್​ ತಂತ್ರಜ್ಞಾನದೊಂದಿಗೆ ಚಲನಚಿತ್ರದ 4K ಆವೃತ್ತಿಯು ಸೆಪ್ಟೆಂಬರ್ 22, 2023 ರಂದು ಥಿಯೇಟರ್‌ಗಳಲ್ಲಿ ರಿ-ರಿಲೀಸ್​ ಆಗಲಿದೆ.

2004 ರಲ್ಲಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರ ಮನಗೆದ್ದಿದ್ದ ಈ ಚಿತ್ರವು, ಇದೀಗ 19 ವರ್ಷಗಳ ನಂತರ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗುವ ಮುಖೇನ ಸಿನಿಪ್ರೇಕ್ಷಕರ ಮುಂದೆ ರಾರಾಜಿಸಲಿದೆ. ಚಿತ್ರದಲ್ಲಿ ರವಿಕೃಷ್ಣ ಮತ್ತು ಸೋನಿಯಾ ಅಗರ್ವಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net