ಸ್ವಸಹಾಯ ಸಂಘದ ಸದಸ್ಯರಿಗೆ ಹಣಕಾಸಿನ ವ್ಯವಹಾರ ಸಾಕ್ಷರತೆ ಅಗತ್ಯ

udp-18-canara bank
Published on

ಉಡುಪಿ: ಜನ ಸಾಮಾನ್ಯರು, ಮುಖ್ಯವಾಗಿ ಸ್ವ ಸಹಾಯ ಸಂಘದ ಸದಸ್ಯರು ಹಣಕಾಸಿನ ವ್ಯವಹಾರದಲ್ಲಿ ಸಾಕ್ಷರತೆಯನ್ನು ಪಡೆದುಕೊಳ್ಳಬೇಕು. ಕೆವೈಸಿ ನೀಡುವಲ್ಲಿ ತೊಂದರೆಯಾದರೆ ಭಾರತೀಯ ರಿಸರ್ವ್​ ಬ್ಯಾಂಕಿನ ಗಮನಕ್ಕೆ ತರಬಹುದು. ಆರ್ಥಿಕ ವ್ಯವಹಾರದ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು ಎಂದು ಭಾರತೀಯ ರಿಸರ್ವ್​ ಬ್ಯಾಂಕಿನ ಬೆಂಗಳೂರು ಪ್ರಾದೇಶಿಕ ಕಚೇರಿಯ ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗದ ಮಹಾ ಪ್ರಬಂಧಕಿ ಸುನಂದ ಬಾತ್ರ ಹೇಳಿದರು.

ಶುಕ್ರವಾರ ಉಡುಪಿಯಲ್ಲಿ ರಿಸರ್ವ್​ ಬ್ಯಾಂಕ್​ ಆಫ್​ ಇಂಡಿಯಾ, ಹಣಕಾಸು ಸೇರ್ಪಡೆ ಮತ್ತು ಅಭಿವೃದ್ಧಿ ಇಲಾಖೆ, ಬೆಂಗಳೂರು, ಲೀಡ್​ ಡಿಸ್ಟ್ರಿಕ್ಟ್​ ಆಫೀಸ್​, ಕೆನರಾ ಬ್ಯಾಂಕ್​ ವತಿಯಿಂದ ಆಯೋಜಿಸಿದ ಕ್ಷೇತ್ರ ಮಟ್ಟದ ಆರ್ಥಿಕ ಸಾಕ್ಷರತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತೀಯ ರಿಸರ್ವ್​ ಬ್ಯಾಂಕಿನ ಬೆಂಗಳೂರು ಪ್ರಾದೇಶಿಕ ಮುಖ್ಯ ಮಹಾ ಪ್ರಬಂಧಕ ಪಿ.ಎನ್​. ರಘನಾಥ ಮಾತನಾಡಿ, ಸಮಾಜದ ಪ್ರತಿಯೊಬ್ಬರು ಹಣಕಾಸಿನ ವ್ಯವಹಾರದ ಬಗ್ಗೆ ಅಥವಾ ಹಣ ಬಳಕೆಯ ಮಾಡುವ ವಿಧಗಳ ಬಗ್ಗೆ ಸ್ವತ: ತಿಳುವಳಿಕೆ ಹೊಂದುವುದು ಅತಿ ಅಗತ್ಯ ಎಂದರು.

ಮುಖ್ಯ ಅತಿಥಿಯಾಗಿದ್ದ ಮಣಿಪಾಲ ಕೆನರಾ ಬ್ಯಾಂಕಿನ ಮಾಹಾ ಪ್ರಬಂಧಕ ಪಂಡಿತ್​ ಎಂ.ಜಿ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದರು.

ಜಿಪಂ ಎನ್​ ಆರ್​ ಎಲ್​ ಎಂ ಯೋಜನಾ ನಿರ್ದೇಶಕ ನವೀನ ಕುಮಾರ್​ ಎಚ್​. ಡಿ., ನರ್ಬಾಡ್​ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಸಂಗೀತಾ ಕರ್ತಾ ಮಾತನಾಡಿದರು. ಭಾರತೀಯ ರಿಸರ್ವ್​ ಬ್ಯಾಂಕಿನ ವ್ಯವಸ್ಥಾಪಕ ತನು ನಂಜಪ್ಪ ಸ್ವಾಗತಿಸಿದರು. ಲೀಡ್​ ಬ್ಯಾಂಕಿನ ಎಲ್​ ಡಿ ಎಂ ಪಿ.ಎಂ.ಪಿಂಜಾರ್​ ವಂದಿಸಿದರು. ರುಡ್​ ಸೆಟ್​ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಕರುಣಾಕರ ಜೈನ್​ ಮತ್ತು ಎಲ್​ ಆರ್​ ಎಲ್​ ಎಂ ಜಿಲ್ಲಾ ಸಂಯೋಜಕಿ ನವ್ಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net