ಪಟಾಕಿ ಕಾರ್ಖಾನೆ ಸ್ಫೋಟ; 7 ಮಂದಿ ಮೃತ್ಯು, ಹಲವರ ಸ್ಥಿತಿ ಗಂಭೀರ

7 killed in cracker factory explosion in Bengal's East Midnapore
Published on

ಪಶ್ಚಿಮ ಬಂಗಾಳ: ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ಮಂಗಳವಾರ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಏಳು ಜನರು ಸಾವನ್ನಪ್ಪಿದ್ದಾರೆ.

ಪೂರ್ವ ಮಿಡ್ನಾಪುರದ ಎಗ್ರಾದಲ್ಲಿರುವ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ ಸ್ಥಳದಲ್ಲಿ ಹೊಗೆ ಕಾಣಿಸಿಕೊಂಡಿದೆ. ಸ್ಫೋಟದಲ್ಲಿ ಸಿಲುಕಿದ ಜನರಿಗೆ ಸಹಾಯ ಮಾಡಲು ಸ್ಥಳೀಯರು ಧಾವಿಸಿದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಸತಿ ಕಟ್ಟಡದಿಂದ ನಡೆಸುತ್ತಿದ್ದ ಕಾರ್ಖಾನೆ ಕುಸಿದಿದೆ. ತನಿಖೆ ನಡೆಯುತ್ತಿದೆ. ಏಳು ಮಂದಿ ಪ್ರಾಣ ಕಳೆದುಕೊಂಡ ಸ್ಫೋಟವನ್ನು ಬಂಗಾಳ ಸಿಐಡಿ ವಹಿಸಿಕೊಂಡಿದೆ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ 2.5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

"ಸ್ಪೋಟ ಸಂಭವಿಸಿದ ಪ್ರದೇಶ ಒಡಿಶಾ ಗಡಿಗೆ ಸಮೀಪದಲ್ಲಿದೆ. ಕಾರ್ಖಾನೆಯ ಮಾಲೀಕನನ್ನು ಈ ಹಿಂದೆ ಬಂಧಿಸಲಾಗಿತ್ತು. ಜಾಮೀನು ಸಿಕ್ಕ ನಂತರ ಅಕ್ರಮ ಕಾರ್ಖಾನೆಯನ್ನು ಪುನರಾರಂಭಿಸಿದ್ದಾನೆ. ಅವನು ಮತ್ತೆ ಅಕ್ರಮವಾಗಿ ತನ್ನ ವ್ಯವಹಾರವನ್ನು ಪ್ರಾರಂಭಿಸಿದನು. ಈತ ಪರಾರಿಯಾಗಿದ್ದಾನೆ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಟಾಕಿ ತಯಾರಿಕೆ ಹೆಸರಿನಲ್ಲಿ ಬಾಂಬ್‌ಗಳನ್ನು ತಯಾರಿಸಲಾಗುತ್ತಿತ್ತು ಎಂದು ವರದಿಯಾಗಿದೆ. ಪಟಾಕಿ ತಯಾರಿಸುವ ಅಕ್ರಮ ಕಾರ್ಖಾನೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net