More

    ಹೆಣ್ಣುಮಗು ದತ್ತು ಪಡೆದ ‘ಕೋಟಿಗೊಬ್ಬ 3’ ನಟಿ ಅಭಿರಾಮಿ

    ಬೆಂಗಳೂರು: ಮದುವೆ ನಂತರ ತಂದೆ ತಾಯಿ ಆಗುವುದು ಒಂದು ಸುಂದರ ಕ್ಷಣ. ಇದು ಜನಸಾಮಾನ್ಯರು ಹಾಗೂ ಸ್ಟಾರ್​​ ನಟಿ-ನಟಿಯರಿಗೂ ಅನ್ವಯವಾಗುತ್ತದೆ. ನಟಿಯೊಬ್ಬರು ಮದುವೆಯಾಗಿ 14 ವರ್ಷಗಳ ನಂತರ ಮಗುವನ್ನು ದತ್ತು ಪಡೆದುಕೊಂಡಿದ್ದಾರೆ.

    ನಟಿ ಅಭಿರಾಮಿ, ರಾಹುಲ್‌ ಪವನ್‌ ಎಂಬುವರನ್ನು ಮದುವೆ ಆಗಿದ್ದಾರೆ. ಮದುವೆ ಆಗಿ 14 ವರ್ಷಗಳಾದರೂ ಈ ಜೋಡಿಗೆ ಮಕ್ಕಳು ಆಗಿಲ್ಲ. ಹೀಗಾಗಿ ನಟಿ ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಮೇ 14 ವಿಶ್ವ ತಾಯಂದಿರ ದಿನದಂದು ಅಭಿರಾಮಿ ಈ ಖುಷಿಯ ವಿಚಾರವನ್ನು ತಮ್ಮ ಅಭಿಮಾನಿಗಳೊಂದಿಗೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    View this post on Instagram

    A post shared by Abhirami (@abhiramiact)

    ”ಪ್ರೀತಿಯ ಸ್ನೇಹಿತರೇ, ರಾಹುಲ್‌ ಹಾಗೂ ನಾನು ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಥ್ರಿಲ್‌ ಆಗಿದ್ದೇವೆ. ನಾವು ಈಗ ಕಲ್ಕಿ ಎಂಬ ಹೆಣ್ಣು ಮಗುವಿನ ಪೋಷಕರಾಗಿದ್ದೇವೆ. ನಾವು ಈ ಮಗುವನ್ನು ಕಳೆದ ವರ್ಷ ದತ್ತು ಪಡೆದಿದ್ದೇವೆ. ಈ ಮಗು ನಮ್ಮ ಜೀವನದಲ್ಲಿ ಬಂದ ನಂತರ ಎಲ್ಲವೂ ಬದಲಾವಣೆ ಆಗಿದೆ. ತಾಯಂದಿರ ದಿನವನ್ನು ಸೆಲೆಬ್ರೇಟ್‌ ಮಾಡಲು ಬಹಳ ಖುಷಿ ಆಗುತ್ತಿದೆ. ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಇರಲಿ” ಎಂದು ಅಭಿರಾಮಿ ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಹಿಂದುಗಳ ಜಾತ್ರೆಯಲ್ಲಿ ಆರೇಂಜ್ ಜ್ಯೂಸ್ ವಿತರಿಸಿದ ಮುಸ್ಲಿಮರು; ಭಾವೈಕ್ಯತೆಗೆ ಸಾಕ್ಷಿಯಾದ ಜನರು

    ನಟಿಯ ಇನ್‌ಸ್ಟಾಗ್ರಾಮ್​ನ ಈ ಫೋಸ್ಟ್​​ ನೋಡಿದ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಶುಭ ಕೋರಿದ್ದಾರೆ. ಈ ಜೋಡಿ ಹೆಣ್ಣು ಮಗುವನ್ನು ದತ್ತು ಪಡೆದಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

    ಅಭಿರಾಮಿ 2009ರಲ್ಲಿ ಮಲಯಾಳಂ ಖ್ಯಾತ ಸಾಹಿತಿ ಪುತನ್‌ ವೆಟೆಲ್‌ ನಾರಾಯಣನ್‌ ನಾಯರ್‌ ಅವರ ಮೊಮ್ಮಗ ರಾಹುಲ್‌ ಪವನ್‌ ಎಂಬುವರನ್ನು ಮದುವೆ ಆಗಿದ್ದಾರೆ. ಆದರೆ ಮದುವೆ ಆಗಿ 14 ವರ್ಷಗಳಾದರೂ ಈ ಜೋಡಿಗೆ ಮಕ್ಕಳು ಆಗಿಲ್ಲ.

    ಕಿಡ್ನಿ ರೋಗಿಗಳ ಸಹಾಯಕ್ಕಾಗಿ ಸಂಗೀತ ಕಾರ್ಯಕ್ರಮ, ಕಲಾ ಪ್ರದರ್ಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts