More

    ಕಿಡ್ನಿ ರೋಗಿಗಳ ಸಹಾಯಕ್ಕಾಗಿ ಸಂಗೀತ ಕಾರ್ಯಕ್ರಮ, ಕಲಾ ಪ್ರದರ್ಶನ

    ಬೆಂಗಳೂರು: ಮಾತಿನ ಮನೆ, ನೋಬಲ್ ಹಾರ್ಟ್ಸ್, ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯ ಸಂಸ್ಥೆ ಸಹಯೋಗದೊಂದಿಗೆ PASSION ಎನ್ನುವ ಒಂದು ಅದ್ಧೂರಿಯಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ನಿಧಿ ಸಂಗ್ರಹಿಸಿ ಬೆಂಗಳೂರು ಕಿಡ್ನಿ ಫೌಂಡೇಶನ್ ನೀಡುವ ಮಹತ್ತರವಾದ ಯೋಜನೆ ಇದಾಗಿದೆ.

    ಬರುವ ಭಾನುವಾರ ಅಂದರೆ,2023 ಮೇ21 ರಂದು ನಗರದ ಕೆ. ಆರ್​​ ರಸ್ತೆಯ ಕುವೆಂಪು ಕಲಾಕ್ಷೇತ್ರದಲ್ಲಿ ಸಂಜೆ 4 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದೆ. ನೋಬಲ್ ಹಾರ್ಟ್ಸ್ (ಸತ್ಯಪ್ರಸಾದ್), ಸಂಜೋಗ್ ಬಾನ್ಸುರಿ ಮಹಾವಿದ್ಯಾಲಯ (ಪಂ. ಪ್ರವೀಣ್ ಗೋಡ್ಖಿಂಡಿ) ಹಾಗೂ ಮಾತಿನ ಮನೆ (ರಾ ಸು ವೆಂಕಟೇಶ) ಈ ಮೂರು ಸಂಸ್ಥೆಗಳು ಸೇರಿ‌ ಹಮ್ಮಿಕೊಂಡಿರುವ ಅನನ್ಯವಾದ ನಿಧಿ ಸಮರ್ಪಣಾ ಕಾರ್ಯಕ್ರಮವೇ PASSION.

    ಕಾರ್ಯಕ್ರಮಗಳ ವಿವರ:ಸಾರಿಕಾ ಗೋಡ್ಖಿಂಡಿ ಹಾಗೂ ಕಿಶೋರ್ ಮೇದಪ್ಪ ಅವರ ವರ್ಣಚಿತ್ರಗಳ ಚೊಚ್ಚಲ ಪ್ರದರ್ಶನ ಮತ್ತು ಮಾರಾಟ ಹಾಗೂ ಕೃಷ್ಣ ಫ್ಯುಷನ್ ಬ್ಯಾಂಡ್ ನ ಜೊತೆ ಪಂಡಿತ್ ಪ್ರವೀಣ್ ಗೊಡ್ಖಿಂಡಿಯವರ ವಿಶೇಷ ಕೊಳಲುವಾದನ ಕಾರ್ಯಕ್ರಮಗಳು ಅಂದಿನ ಆಕರ್ಷಣೆಯಾಗಿರುತ್ತವೆ.

    ನಿಧಿ ಸಂಗ್ರಹ:ವರ್ಣಚಿತ್ರಗಳ ಮಾರಾಟದಿಂದ ಸಂಗ್ರಹವಾಗುವ ಮೊತ್ತದ ಒಂದು ಭಾಗವನ್ನು ಬಡ ಹಾಗೂ ಅಗತ್ಯವಿರುವ ರೋಗಿಗಳಿಗೆ ಡಯಾಲಿಸೀಸ್ ಸೇವೆಯನ್ನು ಉಚಿತವಾಗಿ ಅಥವಾ ಕನಿಷ್ಠ ದರದಲ್ಲಿ ದೊರಕಿಸಲು ಬೆಂಗಳೂರು ಕಿಡ್ನಿ ಫೌಂಡೇಶನ್ ಗೆ ನೀಡುವ ಬೃಹತ್ ಯೋಜನೆ ಇದಾಗಿದೆ.

    ಇದನ್ನೂ ಓದಿ: ಹಿಂದುಗಳ ಜಾತ್ರೆಯಲ್ಲಿ ಆರೇಂಜ್ ಜ್ಯೂಸ್ ವಿತರಿಸಿದ ಮುಸ್ಲಿಮರು; ಭಾವೈಕ್ಯತೆಗೆ ಸಾಕ್ಷಿಯಾದ ಜನರು

    ಈಗಾಗಲೇ ದಾನಿಗಳಿಂದ ಸಂಗ್ರಹವಾಗಿರುವ 400000 ರೂ. ಕ್ಕೂ ಮಿಗಿಲಾದ ನಿಧಿಯನ್ನು ಬೆಂಗಳೂರು ಕಿಡ್ನಿ ಫೌಂಡೇಶನ್ಸ್​​​ಗೆ ಸಮರ್ಪಿಸಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಿದ್ದು, ಸ್ಥಳದಲ್ಲೇ ಬಿ ಕೆ ಎಫ್ ಸಂಸ್ಥೆಗೆ ದೇಣಿಗೆ ನೀಡಲು ವ್ಯವಸ್ಥೆಯಿದ್ದು, ಈ ಕೊಡುಗೆಗೆ 80G ಅಡಿ ಆದಾಯ ತೆರಿಗೆಯಲ್ಲಿ ವಿನಾಯಿತಿ ಸಿಗಲಿದೆ.

    ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕರು ಡಾ ಸಿ ಎನ್ ಮಂಜುನಾಥ್, ಬೆಂಗಳೂರು ಕಿಡ್ನಿ ಫೌಂಡೇಶನ್ ಮುಖ್ಯಸ್ಥರು ಡಾ ಪಿ. ಶ್ರೀರಾಮ್, ಸ್ಥಾನಿಕ ನಿರ್ದೇಶಕರು ಡಿ. ಮಹೇಂದ್ರ, ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಮತ್ತು ಡಾ. ಎಲ್ ಯತೀಂದ್ರ, ಜಂಟಿ ನಿರ್ದೇಶಕರು, ಎನ್ ಐ ಎಫ್ ಟಿ ಇವರುಗಳು ಗೌರವ ಅತಿಥಿಗಳಾಗಿ‌ ಅಂದು ಆಗಮಿಸಲಿದ್ದಾರೆ.

    ಮೇ 19 ರಂದು ಚೌಡಯ್ಯದಲ್ಲಿ ಅಮೃತಮಾಲಾ; ಡಾ.ರವೀಂದ್ರ ಕಾಟೋಟಿ ಅವರಿಂದ ಸಮಯ ಚಕ್ರ ರಾಗ ಮಾಲಾ ಎಂಬ ಹೊಸ ಪ್ರಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts