ಯುಸಿಸಿಗೆ ಶೇ.67 ಮುಸ್ಲಿಂ ಮಹಿಳೆಯರ ಬೆಂಬಲ: ಶೇ. 25.4 ಸ್ತ್ರೀಯರ ವಿರೋಧ; ಖಾಸಗಿ ಸಂಸ್ಥೆಯಿಂದ ಸಮೀಕ್ಷೆ

Uniform Civil code (1)
Published on

ನವದೆಹಲಿ: ಸಮಾನ ನಾಗರಿಕ ಸಂಹಿತೆಯನ್ನು (ಯುಸಿಸಿ) ಶೇ. 67.2 ಮುಸ್ಲಿಂ ಮಹಿಳೆಯರು ಬೆಂಬಲಿಸಿದ್ದಾರೆ. ವಿವಾಹ, ವಿಚ್ಛೇದನ, ದತ್ತು, ಉತ್ತರಾಧಿಕಾರ ವಿಷಯಗಳಲ್ಲಿ ಸಮಾನ ಕಾನೂನು ಅಗತ್ಯವೆಂದು ಆವರು ಅಭಿಪ್ರಾಯಪಟ್ಟಿದ್ದಾರೆ.

25 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಖಾಸಗಿ ಸಂಸ್ಥೆ ನಡೆದ ಸಮೀಕ್ಷೆಗೆ 18 ವರ್ಷದಿಂದ 65 ವರ್ಷ ಮೇಲ್ಪಟ್ಟ 8,035 ಮುಸ್ಲಿಂ ಮಹಿಳೆಯರು ಪ್ರತಿಕ್ರಿಯಿಸಿದ್ದು, ಯುಸಿಸಿ ಜಾರಿಗೆ 5,403 ಮಂದಿ ಒಪ್ಪಿಗೆ ನೀಡಿದ್ದರೆ, 2,039 ಮಂದಿ ವಿರೋಧಿಸಿದ್ದಾರೆ. 593 ಮಹಿಳೆಯರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಮೀಕ್ಷೆಯಲ್ಲಿ ಅನಕ್ಷರಸ್ಥ ಮಹಿಳೆಯಿಂದ ಆರಂಭಿಸಿ ಸ್ನಾತಕೋತ್ತರ ಪದವೀಧರರವರೆಗೆ ವಿವಿಧ ಶೈಕ್ಷಣಿಕ ಅರ್ಹತೆಯ, ಸಾಮಾಜಿಕ ಸ್ತರದಲ್ಲಿ ವಿವಿಧ ವರ್ಗದವರು ಭಾಗಿಯಾಗಿದ್ದರು.

ಭಾರತದಲ್ಲಿ ಎಲ್ಲ ಧರ್ಮಗಳ, ಜಾತಿ, ಪಂಗಡಗಳಿಗೆ ವಿವಾಹ, ವಿಚ್ಛೇದನ, ದತ್ತು, ಉತ್ತರಾಧಿಕಾರಿ, ಕುಟುಂಬ ನಿರ್ವಹಣೆ ಸೇರಿ ವಿವಿಧ ರೀತಿಯ ಕಾನೂನುಗಳನ್ನು ಸಮಾನವಾಗಿಸುವುದು ಯುಸಿಸಿ ಉದ್ದೇಶ. ಆದರೆ, ಇದರಿಂದ ಮುಸ್ಲಿಮರ ಧಾರ್ವಿುಕ ಹಕ್ಕುಗಳಿಗೆ ಚ್ಯುತಿ ಆಗುತ್ತದೆ ಎಂದು ಮುಸ್ಲಿಂ ಸಂಘಟನೆಗಳು ಇದನ್ನು ವಿರೋಧಿಸಿವೆ. ಬಹುಸಖ್ಯಾಂತ ನೈತಿಕತೆಯು ಅಲ್ಪಸಂಖ್ಯತರ ಧಾರ್ವಿುಕ ಸ್ವಾತಂತ್ರ್ಯ ಮತ್ತು ಸಮುದಾಯದ ಹಕ್ಕನ್ನು ಕಸಿದುಕೊಳ್ಳಬಾರದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್​ಬಿ) ಹೇಳಿದೆ. ಮುಸ್ಲಿಂ ಸಂಘಟನೆಗಳು ಹೇಳುವಂತೆ ಈ ಪಂಗಡದಲ್ಲಿ ವಿಶೇವಾಗಿ ಮಹಿಳೆಯರಲ್ಲಿ ನಿಜಕ್ಕೂ ಯುಸಿಸಿ ಬಗ್ಗೆ ವಿರೋಧ ಇದೆಯೇ ಎಂಬುದನ್ನು ತಿಳಿಯಲು ಈ ಸಮೀಕ್ಷೆ ನಡೆಸಲಾಯಿತು ಎಂದು ಸಂಸ್ಥೆ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net