Viral Photo | 23ರ ಯುವತಿಯನ್ನು ಪ್ರೀತಿಸಿ ವಿವಾಹವಾದ 65 ವರ್ಷದ ವೃದ್ಧ!

Love Marriage
Published on

ಉತ್ತರಪ್ರದೇಶ: 65 ವರ್ಷದ ನಕಾಖೇದ್ ಯಾದವ್ ಎಂಬಾತ ತನ್ನ ಮಗಳ ವಯಸ್ಸಿನ ನಂದಿನಿ ಯಾದವ್ (23) ಎಂಬ ಯುವತಿಯನ್ನು ವಿವಾಹವಾಗಿ ಸುದ್ದಿಯಾಗಿದ್ದಾನೆ. ಮದುವೆಯಾದ ನಕಾಖೇದ್ ಯಾದವ್​ಗೆ ಈಗಾಗಲೇ 6 ಜನ ಹೆಣ್ಣು ಮಕ್ಕಳಿದ್ದಾರೆ.

ಅಯೋಧ್ಯೆ ಜಿಲ್ಲೆಯ ರುದೌಲಿ ಎಂಬಲ್ಲಿರುವ ಮಾ ಕಾಮಾಖ್ಯ ದೇವಸ್ಥಾನದಲ್ಲಿ ಹಿಂದು ಸಂಪ್ರದಾಯದಂತೆ ಏಳು ಸುತ್ತು ಪ್ರದಕ್ಷಿಣೆ ಹಾಕಿ ಇವರಿಬ್ಬರ ವಿವಾಹ ಕಾರ್ಯಕ್ರಮ ನಡೆದಿದೆ. ಇವರು ಮದುವೆಗೆ ಸಂಬಂಧಿಕರು ಸೇರಿದಂತೆ ನೂರಾರು ಜನರು ಸೇರಿದ್ದರು. ಇದೀಗ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದೀಗ ಎರಡನೇ ವಿವಾಹವಾಗಿರುವುದರ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಿರುವ ನಕಾಖೇದ್ ಯಾದವ್, ಮೊದಲ ಪತ್ನಿಯ ಮರಣದ ನಂತರ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದೆ. ಒಂಟಿ ಜೀವನದಿಂದ ಬೇಸತ್ತು ಮತ್ತೆ ಮದುವೆ ಮಾಡಿಕೊಳ್ಳಲು ಮನಸ್ಸು ಮಾಡಿದೆ ಎಂದು ಹೇಳಿಕೊಂಡಿದ್ದಾರೆ. ಇದೀಗ ನಕಾಖೇದ್ ಅವರ ಹಿರಿಯ ಪುತ್ರಿ ಮುಂದೆ ನಿಂತು ತಂದೆಯ ಎರಡನೇ ಮದುವೆಗೆ ಬೆಂಬಲ ಸೂಚಿಸಿದ್ದಾರೆ.

ಮೊದಲ ಪತ್ನಿಯ ಮರಣದ ನಂತರ ನಕಾಖೇದ್ ಯಾದವ್ ವೈಯಕ್ತಿಕ ಕೆಲಸದ ನಿಮಿತ್ತ ರಾಂಚಿಗೆ ಹೋಗಿದ್ದರು. ಈ ವೇಳೆ 23 ವರ್ಷದ ಯುವತಿ ನಂದಿನಿಯ ಭೇಟಿಯಾಗಿದ್ದರು. ಕೆಲ ದಿನಗಳ ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಬಳಿಕೆ ನಂದಿನಿ ಮತ್ತು ನಕಾಖೇದ್ ಮದುವೆಯಾಗುವ ನಿರ್ಧಾರ ಕೈಗೊಂಡಿದ್ಧಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net