60 ಸೆಕೆಂಡ್​ನಲ್ಲಿ 60 ಸ್ಥಳ: ಒಂದು ರೀಲ್ಸ್​ಗೆ ಈ ವ್ಲಾಗರ್​ ಖರ್ಚು ಮಾಡಿದ ಹಣದ ಮೊತ್ತ ಕೇಳಿದ್ರೆ ಬೆರಗಾಗ್ತೀರಿ! Karthik Surya

Karthik Surya
Published on

Karthik Surya: ಕೆಲವರಿಗೆ ಸಾಮಾಜಿಕ ಜಾಲತಾಣದ ಮೇಲೆ ಎಷ್ಟು ಕ್ರೇಜ್​ ಇರುತ್ತದೆ ಅಂದರೆ, ರೀಲ್ಸ್​ ಮತ್ತು ಶಾರ್ಟ್ಸ್​ನಿಂದ ಹಣ ಗಳಿಸುವುದಿರಲಿ ತಾವೇ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಒಂದೇ ಒಂದು ರೀಲ್ಸ್​ಗೆ ಖರ್ಚು ಮಾಡಿರುವ ಹಣದ ಮೊತ್ತ ಕೇಳಿದ್ರೆ ನೀವು ಒಂದು ಕ್ಷಣ ಹುಬ್ಬೇರಿಸುತ್ತೀರಿ.

ಹೌದು, ಕೇರಳದ ವ್ಲಾಗರ್​ ಮತ್ತು ಆ್ಯಂಕರ್​ ಕಾರ್ತಿಕ್​ ಸೂರ್ಯ ( Karthik Surya ), 60 ಸೆಕೆಂಡುಗಳಲ್ಲಿ ಕೇರಳದ 60 ಸ್ಥಳಗಳನ್ನು ತೋರಿಸುವ ವಿಡಿಯೋ ಮಾಡಿದ್ದು, ಇದಕ್ಕಾಗಿ ಅವರು ಸಾವಿರಾರು ರೂಪಾಯಿ ವ್ಯಯಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಸೂಪರ್​ಸ್ಟಾರ್​ ರಜಿನಿಕಾಂತ್​ ನಟನೆಯ ವೆಟ್ಟೈಯನ್ ಸಿನಿಮಾದ 'ಮನಸಿಲಯೋ' ಹಾಡಿಗೆ ಹೆಜ್ಜೆ ಹಾಕುತ್ತಾ ವಿಡಿಯೋ ಮಾಡಿದ್ದು, ಕೇರಳದ 14 ಜಿಲ್ಲೆಗಳ ಸುಂದರ ತಾಣಗಳನ್ನು ಒಂದೇ ನಿಮಿಷದಲ್ಲಿ ತೋರಿಸಲಾಗಿದೆ.

ಈ ರೀಲ್ಸ್​ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ 65 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಇನ್ನು ಯೂಟ್ಯೂಬ್‌ನಲ್ಲಿ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಸಚಿವ ಮೊಹಮ್ಮದ್ ರಿಯಾಝ್ ಕೂಡ ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ಮಾಡಲು ಎಷ್ಟು ವೆಚ್ಚವಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದು, ಇದಕ್ಕೆ ಕಾರ್ತಿಕ್ ಸೂರ್ಯ ಉತ್ತರ ನೀಡಿದ್ದಾರೆ.

ಕಾರ್ತಿಕ್​ ಸೂರ್ಯ ಅವರು ಸುಮಾರು ಎರಡು ಸಾವಿರದ ಐನೂರು ಕಿಲೋಮೀಟರ್ ಪ್ರಯಾಣ ಮಾಡಿದ್ದು, ಇದಕ್ಕಾಗಿ 27,693 ರೂಪಾಯಿ ಖರ್ಚು ಮಾಡಿದೆ ಎನ್ನುತ್ತಾರೆ ಕಾರ್ತಿಕ್. ಊಟಕ್ಕೆ ಇಪ್ಪತ್ತೈದು ಸಾವಿರ ರೂಪಾಯಿ ಹಾಗೂ ಬಟ್ಟೆ ಖರೀದಿ ಸೇರಿದಂತೆ ಇನ್ನಿತರ ವೆಚ್ಚಕ್ಕೆ 33,000 ರೂಪಾಯಿ ಸೇರಿ ಒಟ್ಟು 86,371 ರೂ. ಖರ್ಚಾಗಿದೆ ಎಂದು ಕಾರ್ತಿಕ್ ತಿಳಿಸಿದ್ದಾರೆ.

ಇದಲ್ಲದೇ ಜೊತೆಗಿದ್ದವರಿಗೆ ಸಂಬಳದ ಹೊರತಾಗಿ ಹಣ ನೀಡಲಾಗುತ್ತಿತ್ತು. ಅವರು ಅಷ್ಟು ಕಷ್ಟಪಟ್ಟಿಲ್ಲವೇ? ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗೂ ಹೆಚ್ಚು ಖರ್ಚಾಗಿದೆ ಎನ್ನುತ್ತಾರೆ ಕಾರ್ತಿಕ್ ಸೂರ್ಯ. ಇನ್ನು ಅಲಪ್ಪುಳದಲ್ಲಿ ಡ್ರೋನ್ ನೀರಿನಲ್ಲಿ ಹೋಯಿತು. ಹಾಗಾಗಿ ಇನ್ನೊಂದು ಡ್ರೋನ್​ ಖರೀದಿಸಿದೆ. ಸುಮಾರು ಎರಡು ಲಕ್ಷ ರೂಪಾಯಿಗೂ ಹೆಚ್ಚು ಹಣ ಖರ್ಚಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net