

Robberies : ಒಂದೇ ಗಂಟೆಯಲ್ಲೇ ಆರು ದರೋಡೆ ಮಾಡಿದ ಕಳ್ಳರನ್ನು ಮೂರೇ ತಾಸಿನಲ್ಲಿ ಮಧ್ಯರಾತ್ರಿ ಶೂಟೌಟ್ ಮಾಡುವ ಮೂಲಕ ಸಿನಿಮಿಯ ರೀತಿಯಲ್ಲಿ ಮೂವರು ಕಳ್ಳರನ್ನು ಹಿಡಿಯುವ ಮೂಲಕ ಪೊಲೀಸರು ಯಶ ಕಂಡಿದ್ದಾರೆ. ಅಲ್ಲದೆ, ಪದೇಪದೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಖದೀಮರಿಗೆ ಕೊನೆಗೆ ಕೋಳ ತೋಡಿಸಿದ್ದಾರೆ.
ಹೌದು, ಪಕ್ಕದ ತಮಿಳುನಾಡಿನ ಚೈನ್ನೈನಲ್ಲಿ ಈ ಘಟನೆ ನಡೆದಿದ್ದು, ಸತತ ಆರು ದರೋಡೆಗಳನ್ನು ಸಿಸಿಟಿವಿ ಮೂಲಕ ಪೊಲೀಸರು ಪ್ರಕರವನ್ನು ಹೇಗೆ ಬಂಧಿಸಿದರು ಎನ್ನುವುದನ್ನು ತಿಳಿಯೋಣ.
ಚೈನ್ನೈ ಮಹಾನಗರದಲ್ಲಿ ಮಾರ್ಚ್.25ರಿಂದ ಬೆಳಗ್ಗೆ 6.30ಕ್ಕೆ ಪೊಲೀಸ್ ವಾರ್ ರೂಮ್ಗೆ ಸರಗಳ್ಳತನದ ಬಗ್ಗೆ ಕರೆ ಬರುತ್ತೆ. ಬಳಿಕ ಮತ್ತೆ ಕೆಲ ಕ್ಷಣಗಳ ನಂತರ ಮತ್ತೊಂದು ಸರಗಳ್ಳತನದ ಬಗ್ಗೆ ಕರೆ ದಾಖಲಾಗುತ್ತದೆ. ಇದರಿಂದ ಎಚ್ಚತ್ತ ಪೊಲೀಸರು ನಗರದಲ್ಲಿನ ಕಳ್ಳತನ ವಿರೋಧಿ ಗಸ್ತು ದಳವನ್ನು ಎಚ್ಚರಿಸಲಾಯಿತು. ಒಂದೇ ಗಂಟೆಯಲ್ಲೇ ವಿವಿಧ ಠಾಣೆಯಲ್ಲಿ ಆರು ಸರಗಳ್ಳತನದ ಬಗ್ಗೆ ಪ್ರಕರಣ ದಾಖಲಾಗಿತ್ತು. ಕೂಡಲೇ ಸಿಸಿಟಿವಿ ಪರಿಶೀಲಿಸಿದ ಅಧಿಕಾರಿಗಳಿಗೆ ಗೊತ್ತಾಗಿದ್ದು, ಈ ಆರು ಸರಗಳ್ಳತನ ಮಾಡಿದ್ದು, ಒಂದೇ ಗ್ಯಾಂಗ್ ಎಂದು. ಅಲ್ಲಿಂದ ಕಳ್ಳರನ್ನು ಹಿಡಿಯಲು ತಂಡ ರಚಿಸಿ ಕಾರ್ಯಚರಣೆಗೆ ಫಿಲ್ಡ್ಗೆ ಇಳಿದರು.
ಇನ್ನು ಕಳ್ಳತನ ಮಾಡಿದ ಕಳ್ಳರು ಬೈಕ್ ಮೇಲೆ ನಗರದ ವಿಮಾನ ನಿಲ್ದಾಣದತ್ತ ಧಾವಿಸುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಇದನ್ನು ಬೆನ್ನಟ್ಟಿದ ಪೊಲೀಸರಿಗೆ, ವಿಮಾನ ನಿಲ್ದಾಣ ಹೊರ ಭಾಗದಲ್ಲಿ ಅವರ ಬೈಕ್ ಮಾತ್ರ ಸಿಕ್ಕಿತ್ತು. ಆದರೆ, ಖದೀಮರು ಮಾತ್ರ ಪತ್ತೆಯಾಗಲಿಲ್ಲ. ಕಾರಣ, ಅವರ ಮುಖಗಳು ಸಿಸಿಟಿವಿಯಲ್ಲಿ ದಾಖಲಾಗಿರಲಿಲ್ಲ.
ವಿಮಾನ ನಿಲ್ದಾಣದ ಹೊರಗೆ ಬೈಕ್ ಬಿಟ್ಟು ಹೋಗಿದ್ದ ಖದೀಮರು ಹೊರಗಡೆಯೇ ಬಟ್ಟೆಗಳನ್ನು ಬದಲಾಯಿಸಿ ಆಟೋದ ಮೂಲಕ ನಿಲ್ದಾಣಕ್ಕೆ ತೆರಳಿದ್ದಾರೆ. ಆದರೆ, ತಮ್ಮ ಬಟ್ಟೆಯನ್ನು ಬದಲಾಯಿಸಿದ್ದ ಕಳ್ಳರು ತಮ್ಮ ಕಾಲಿನ ಶೂಗಳನ್ನು ಬದಲಾಯಿರಲಿಲ್ಲ. ಇದನ್ನು ಗಮನಿಸಿದ ಪೊಲೀಸರು ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ನಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಈ ಇಬ್ಬರಿಗೆ ಬೈಕ್ ತಂದುಕೊಟ್ಟತಾನೆ ಕರ್ನಾಟಕದ ಮೂರನೇ ಆರೋಪಿ. ಕೊನೆಗೆ ಆತನ್ನು ಬಂಧಿಸಲು ಯತ್ನಿಸಿದಾಗ ಗುಂಡಿನ ಚಕಮಕಿ ನಡೆದಿದೆ. ಪೊಲೀಸರು ಶೂಟೌಟ್ನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಕಂಡಿದ್ದಾರೆ. ಇದೀಗ ಪ್ರಕರಣ ದೇಶದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.
ಬಂಧಿತ ವ್ಯಕ್ತಿಗಳಿಂದ 26.5 ತೊಲ ಮೌಲ್ಯದ ಆರು ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳರು ಕುತ್ತಿಗೆಯಲ್ಲಿದ್ದ ಸರವನ್ನು ಎಳೆದಿದ್ದರಿಂದ 65 ವರ್ಷದ ಮಹಿಳೆ ಗಾಯಗೊಂಡಿದ್ದಾರೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)