ಎನರ್ಜಿ ಡ್ರಿಂಕ್ಸ್​ ಕುಡಿಯೋದ್ರಿಂದ ಹೃದಯಘಾತವಾಗಲಿದಿಯೇ?; ಸತ್ಯ ಏನೆಂದು ತಿಳಿಯಿರಿ.. | Energy Drinks

dk - 2025-03-28T094445.287
Published on

Energy Drinks : ಇತ್ತೀಚಿನ ದಿನಗಳಲ್ಲಿ ಯವಕರು ಟಿವಿ ಜಾಹೀರಾತುಗಳಲ್ಲಿ ಬರುವ ಮತ್ತು ಪಿಟ್ನೆಸ್​ ಐಕಾನ್​ಗಳ ಎನರ್ಜಿ ಡ್ರಿಂಕ್​ಗಳನ್ನು ಕುಡಿಯುವುದನ್ನು ನೋಡಿ ಪ್ರಭಾವಿತರಾಗಿ ತಾವು ಕೂಡ ಎನರ್ಜಿ ಡ್ರಿಂಕ್​ಗಳತ್ತ ಆಕರ್ಷಿತರಾಗುತ್ತಿದ್ದಾರೆ.ಈ ವಿಚಾರದಲ್ಲಿ ಯುವಕರು ಮಾತ್ರವಲ್ಲದೆ, ಎಲ್ಲ ವಯಸ್ಸಿನ ಜನರು ತಮ್ಮನ್ನು ತಾವು ಚೈತನ್ಯಶೀಲರಾಗಿರಿಸಲು ಮತ್ತು ತ್ವರಿತ ಶಕ್ತಿಗಾಗಿ ಇಂತಹ ಪಾನೀಗಳಿಗೆ ಮಾರು ಹೋಗಿದ್ದಾರೆ.

ಈ ಪಾನೀಯಗಳನ್ನು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಹೊಸ ಚೈತನ್ಯ ಅಥವಾ ಶಕ್ತಿ ಬರುತ್ತದೆ, ಆದರೆ ಸತ್ಯವೆಂದರೆ ಅವು ನಿಮ್ಮ ಹೃದಯದ ಆರೋಗ್ಯಕ್ಕೂ ಹೆಚ್ಚಿನ ಹಾನಿಯನ್ನುಂಟುಮಾಡುತ್ತಿವೆ ಎನ್ನುತ್ತಿದೆ ವರದಿ.

ಹಾರ್ವರ್ಡ್​​ ಎಚ್​.ನಡೆಸಿದ ಅಧ್ಯಯನದ ಪ್ರಕಾರ, ವ್ಯಾಯಮದ ನಂತರ ಪಾನೀಗಳನ್ನು ಕುಡಿಯವುದರಿಂದ ವ್ಯಾಯಮಕ್ಕೆ ಯಾವುದೇ ಪ್ರಯೋಜನ ಇಲ್ಲ. ಅಲ್ಲದೆ, ಇದರಿಂದ ಹೃದಯದ ಆರೋಗವನ್ನು ಅಪಾಯಕ್ಕೆ ಸಿಲುಕಿಸುತ್ತದೆ ಎಂದು ವರದಿ ಹೇಳುತ್ತಿದೆ(ಚಾನ್​ ಸ್ಕೂಲ್​​ ಆಫ್​ ಪಬ್ಲಿಕ್​ ಹೆಲ್ತ್​ ವರದಿ). ಇಂತಹ ಪರಿಸ್ಥಿತಿಯಲ್ಲಿ ಎನರ್ಜಿ ಡ್ರಿಂಕ್ಸ್​ ಹೃದಯಘಾತಕ್ಕೆ ಕಾರಣವಾಗಬಹುದೇ ಎಂಬುದು ನೋಡೋಣ..

ಎನರ್ಜಿ ಡ್ರಿಂಕ್ಸ್​ನಲ್ಲಿ ಏನಿದೆ..?

ಶಕ್ತಿ(ಎನರ್ಜಿ ಡ್ರಿಂಕ್ಸ್​) ಪಾನೀಯಗಳು ಮುಖ್ಯವಾಗಿ ಕೆಫೀನ್, ಸಕ್ಕರೆ, ಟೌರಿನ್, ಗೌರಾನಾ ಮತ್ತು ಇತರ ಕೆಲವು ಉತ್ತೇಜಕಗಳನ್ನು ಪಾದರ್ಥಗಳನ್ನು ಹೊಂದಿರುತ್ತದೆ. ಈ ಎಲ್ಲಾ ಅಂಶಗಳು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸಲು ಕೆಲಸ ಮಾಡುತ್ತವೆ. ಆದರೆ. ಅವುಗಳ ಹೆಚ್ಚುವರಿ ಪ್ರಮಾಣವು ಯಾವಗಾಲೂ ಹಾನಿಕಾರಕವೆ ಎದು ತಜ್ಞರು ಹೇಳುತ್ತಾರೆ.

ಎನರ್ಜಿ ಡ್ರಿಂಕ್ಸ್​ ಕುಡಿಯವುದರಿಂದ ಹೃದಯಘಾತವಾಗಬಹುದೇ?

1. ಅತಿಯಾದ ಕೆಫೀನ್

ಎನರ್ಜಿ ಪಾನೀಯಗಳು ಅತಿಯಾದ ಕೆಫೀನ್ ಅಂಶವನ್ನು ಹೊಂದಿರುತ್ತೆ. ಇದು ಹೃದಯ ಬಡತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ಹೃದಯನಾಳದ ವ್ಯವಸ್ಥೆ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ, ಹೃದಯಘಾತದ ಅಪಾಯವನ್ನು ಹೆಚ್ಚಿಸುತ್ತದೆ.

2. ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳ

ಶಕ್ತಿ ಪಾನೀಯಗಳನ್ನು ಕುಡಿದ ನಂತರ ರಕ್ತದೊತ್ತಡ ಹೆಚ್ಚಾಗುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ನಿಮಗೆ ಈಗಾಗಲೇ ಅಧಿಕ ರಕ್ತದೊತ್ತಡ ಇದ್ದರೆ, ಎನರ್ಜಿ ಡ್ರಿಂಕ್ಸ್ ಕುಡಿಯುವುದು ಅಪಾಯಕಾರಿ. ಈ ಕಾರಣದಿಂದಾಗಿ, ಹೃದಯಾಘಾತದ ಅಪಾಯವು ಗಮನಾರ್ಹವಾಗಿ ಹೆಚ್ಚಾಗಬಹುದು.

3. ಅಧಿಕ ಸಕ್ಕರೆ ಮಟ್ಟ

ಹೆಚ್ಚಿನ ಶಕ್ತಿ ಪಾನೀಯಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ, ಇದು ಮಧುಮೇಹ ಮತ್ತು ಬೊಜ್ಜುತನವನ್ನು ಹೆಚ್ಚಿಸುತ್ತದೆ. ಇವೆರಡೂ ಹೃದಯ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಲು ಪ್ರಮುಖ ಕಾರಣಗಳಾಗಿವೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು.

4. ಅನಿಮಿಯತ ಹೃದಯ ಬಡಿತ

ಶಕ್ತಿ ಪಾನೀಯಗಳಲ್ಲಿರುವ ಕೆಫೀನ್ ಮತ್ತು ಇತರ ಉತ್ತೇಜಕಗಳು ಅನಿಯಮಿತ ಹೃದಯ ಬಡಿತಕ್ಕೆ (ಆರ್ಹೆತ್ಮಿಯಾ) ಕಾರಣವಾಗಬಹುದು, ಇದು ಗಂಭೀರ ಸ್ಥಿತಿಗೆ ಕಾರಣವಾಗಬಹುದು. ಇದರಿಂದಾಗಿ ಹೃದಯಾಘಾತದ ಭಯ ಇರುತ್ತದೆ ಎನ್ನುತ್ತದ ವರದಿ.

ವೈಜ್ನಾನಿಕ ಅಧ್ಯಯನಗಳು ಹೇಳೊದೇನು..?

ಎನರ್ಜಿ ಡ್ರಿಂಕ್​​ಗಳ ಅತಿಯಾದ ಸೇವನೆಯಿಂದ ಹೃದಯ ಖಾಯಲೆ ಅಪಾಯ ಹೆಚ್ಚಿಸುತ್ತದೆ ಎಂದು ಅನೇಕ ಅಧ್ಯಯನಗಳು ಕಂಡುಕೊಂಡಿವೆ. ಹೃದಯ ಅನಾರೋಗ್ಯವು ಉಳ್ಳವರ ಹೃದಯ ಬಹುಬೇಗನೆ ಹೃದಯಘಾತದ ಸಾಧ್ಯತೆ ಇದೆ ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net