

ಈಜಿ ಮೋಜು ಮಾಡಲೆಂದು ನೀರಿಗೆ ಇಳಿದ ಆರು ಮಂದಿ ಮೃತಪಟ್ಟ ದುರ್ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ಬೆಳಗ್ಗೆ ಬುಡೆವಿಪೇಟ ಗ್ರಾಮದ ಹಲವರು ಪೆಡವಾಗು ಎಂಬಲ್ಲಿ ಪಿಕ್ನಿಕ್ಗೆ ಹೋಗಿದ್ದರು. ಈಜಲೆಂದು ನದಿಗೆ ಇಳಿದಿದ್ದ ಸುಮಾರು 6 ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.
ಈ ಅವಘಡದ ಬಗ್ಗೆ ಮಾಹಿತಿ ಸಿಕ್ಕಕೂಡಲೇ ಸ್ಥಳೀಯ ಪೊಲೀಸರು ಕೆಲವು ನುರಿತ ಈಜುಗಾರರೊಂದಿಗೆ ಸೇರಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಒಟ್ಟು ನಾಲ್ವರ ಮೃತದೇಹ ಸಿಕ್ಕಿದ್ದು, ಇನ್ನಿಬ್ಬರ ಮೃತದೇಹ ಇನ್ನೂ ಸಿಕ್ಕಿಲ್ಲ.
ಗೊಟ್ಟುಪರ್ತಿ ಮನೋಜ್ (16), ಕೊನವರಪು ರಾಧಾ ಕೃಷ್ಣ (16), ಕರ್ನಾತಿ ರಂಜಿತ್ (16), ಶ್ರೀರಾಮುಲಾ ಶಿವಾಜಿ (17), ಗಂಗಾಧರ್ ವೆಂಕಟ್ (17) ಮತ್ತು ಚಲ್ಲಾ ಭುವನ್ (18). ನೀರುಪಾಲಾದವರು. (ಏಜೆನ್ಸೀಸ್)