

ಮಂಡ್ಯ: ಪಾಂಡವಪುರ ತಾಲೂಕು ಸಿಂಗ್ರೀಗೌಡನಕೊಪ್ಪಲು ಗ್ರಾಮದಲ್ಲಿ ಮೇಕೆಗಳಿಗೆ ಮೇವು ತರಲು ತನ್ನ ಜಮೀನಿನ ಆಲದ ಮರ ಹತ್ತಿದ್ದ ರೈತ ಆಯತಪ್ಪಿ ಮರದಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಗ್ರಾಮದ ಬೆಟ್ಟೇಗೌಡ ಎಂಬವರ ಮಗ ರವಿ (೩೫) ಮೃತ ರೈತ. ಬುಧವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದೆ.ಮರದಿಂದ ಬಿದ್ದು ಒದ್ದಾಡುತ್ತಿದ್ದನ್ನು ನೋಡಿದ ಜನರು ಕೂಡಲೇ ರವಿಯನ್ನು ಪಾಂಡವಪುರ ಸರ್ಕಾರಿ ಆಸ್ಪತ್ರಗೆ ಸಾಗಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ.