VIDEO | ಚಿರತೆ ದಾಳಿ; 6 ಜನರಿಗೆ ಗಂಭೀರ ಗಾಯ!

Untitled design (23)
Published on

ತಮಿಳುನಾಡು: ರಕ್ಷಣಾ ಕಾರ್ಯಾಚರಣೆ ಚಿತ್ರೀಕರಣ ಮಾಡುತ್ತಿದ್ದ ಓರ್ವ ಪತ್ರಕರ್ತ ಸೇರಿದಂತೆ 6 ಮಂದಿ ಚಿರತೆ ದಾಳಿಗೆ ಗಾಯಗೊಂಡ ಘಟನೆ ತಮಿಳುನಾಡಿನ ನೀಲಗಿರಿಯ ಕುನೂರ್​ನಲ್ಲಿ ವರದಿಯಾಗಿದೆ.

ಕಾಡಿನಿಂದ ಸಾಕು ನಾಯಿಯನ್ನು ಬೆನ್ನಟ್ಟಿಕೊಂಡು ಬಂದ ಚಿರತೆ, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿಯ ಬ್ರೂಕ್‌ಲ್ಯಾಂಡ್‌ನ ಮನೆಗೆ ನುಗ್ಗಿದೆ. ಭಯಭೀತರಾದ ನಿವಾಸಿಗಳು ಕೂಡಲೇ ಕುನ್ನೂರು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.

‘‘ಜನರ ಮೇಲೆ ದಾಳಿ ಮಾಡುತ್ತಿದ್ದ ಚಿರತೆಯನ್ನು ಸೆರೆಹಿಡಿಯುವ ರಕ್ಷಣಾ ಕಾರ್ಯಾಚರಣೆ ವೇಳೆ ಮನೆಯೊಳಗೆ ಸಿಲುಕಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಕಾಪಾಡಲು ಅರಣ್ಯ ಇಲಾಖೆ ಮುಂದಾಯಿತು. ಚಿರತೆಯ ದಾಳಿಗೆ 6 ಮಂದಿ ಗಾಯಗೊಂಡಿದ್ದಾರೆ" ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಅರಣ್ಯ ಇಲಾಖೆಗೆ ಮಾಹಿತಿ ಸಿಕ್ಕ ತಕ್ಷಣವೇ ನಾವು ಸ್ಥಳಕ್ಕೆ ಧಾವಿಸಿ ಚಿರತೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆವು. ಪತ್ರಕರ್ತ ಸೇರಿದಂತೆ ಎಲ್ಲ ಗಾಯಾಳುಗಳನ್ನು ಕೂನೂರು ಆಸ್ಪತ್ರೆಗೆ ದಾಖಲಿಸಲಾಗಿದೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net