ಪ್ರೇಯಸಿ ಸಹಕರಿಸದಿದ್ದಕ್ಕೆ ರಾಡ್​ನಿಂದ ಹಲ್ಲೆನಡೆಸಿ ಬರ್ಬರವಾಗಿ ಹತ್ಯೆ ಮಾಡಿದ ಪ್ರಿಯಕರ!

murder
Published on

Boyfriend killed girlfriend in love affair by attacking with iron rod

ಉದಯಪುರ(ರಾಜಾಸ್ತಾನ) ಇಲ್ಲಿನ ಲೇಕ್ ಸಿಟಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮೂರು ದಿನಗಳ ಹಿಂದೆ ಅಂಬಾಮಠ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಯುವತಿ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರೇಮ ಪ್ರಕರಣದಲ್ಲಿ (ಪ್ರೀತಿ) ಕೊಲ್ಲಲ್ಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯನ್ನು ಕೊಂದ ವ್ಯಕ್ತಿ ಆಕೆ ಪ್ರಿಯಕರ. ಯುವತಿಯನ್ನು ಭೇಟಿಯಾದ ಬಳಿಕ ಆಕೆಯನ್ನು ತನ್ನೊಂದಿಗೆ ಬರುವಂತೆ ಪ್ರಿಯಕರ ಒತ್ತಾಯಿಸಿದ್ದಾನೆ. ಆದರೆ ಆಕೆ ಇದಕ್ಕೆ ವಿರೋಧಿಸಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆರೋಪಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಲು ಕೂಡ ಪ್ರಯತ್ನಿಸಿದ್ದಾನೆ. ಇದೇ ವಿಚಾರವಾಗಿ ಆಕೆಯ ತಲೆಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದು, ಆಕೆ ಮೃತಪಟ್ಟಿದ್ದಾಳೆ.

ನಂತರ ಆರೋಪಿ ಆಕೆಯ ಕೊರಳಿಗೆ ಸೀರೆ ಕಟ್ಟಿ ಪೊದೆಯೊಂದರಲ್ಲಿ ಎಸೆದು ಅಲ್ಲಿಂದ ಓಡಿ ಹೋಗಿದ್ದಾನೆ. ಇದಕ್ಕೆ ಮತ್ತೊಬ್ಬ ಯುವಕ ಸಹ ಸಹಕರಿಸಿದ್ದು, ಕೊಲೆ ನಂತರ ಇಬ್ಬರೂ ಮೊಬೈಲ್ ಬಳಸಿರಲಿಲ್ಲ. ಹಾಗಾಗಿ ಆರೋಪಿಗಳ ಪತ್ತೆ ಕಷ್ಟವಾಗಿತ್ತು. ಆರೋಪಿ ಪತ್ತೆಗೆ ಪೊಲೀಸರು ತಂಡ ರಚಿಸಿದ್ದು, ಇಬ್ಬರನ್ನೂ ಬಂಧಿಸಲಾಗಿದೆ. ಹದಿಹರಯದವರು ಪ್ರೀತಿ - ಪ್ರೇಮದ ಹೆಸರಲ್ಲಿ ವಂಚಿಸುವವರು ಇರುವುದರಿಂದ ಎಚ್ಚರಿಕೆ ಅಗತ್ಯ ಎಂದು ಪೊಲೀಸ್ ವರಿಷ್ಠಾಧಿಕಾರಿ ಭುವನ್ ಭೂಷಣ್ ಯಾದವ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net